ಉಡುಪಿಯ ಕೊಡವೂರಿನಲ್ಲಿ ಆಯೋಜಿಸಿದ್ದ 'ಮನೆಗೊಂದು ಗ್ರಂಥಾಲಯ ಅಭಿಯಾನ'ವನ್ನು ಮಾನಸ ಉದ್ಘಾಟಿಸಿದರು. ಪೂರ್ಣಿಮಾ, ಎಂ.ಹರೀಶ್ಚಂದ್ರ, ರವಿರಾಜ್ ಎಚ್.ಪಿ., ಜನಾರ್ದನ್ ಕೊಡವೂರು, ಪೂರ್ಣಿಮಾ ಜನಾರ್ದನ್, ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
Published on:
Copied
Follow Us
* ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಆಶಯ
* ಉಡುಪಿಯಲ್ಲಿ 'ಮನೆಗೊಂದು ಗ್ರಂಥಾಲಯ' ಉದ್ಘಾಟನೆ
ಉಡುಪಿ: ಎಲ್ಲ ಮನೆಗಳಲ್ಲೂ ಪೂಜಾ ಕೋಣೆ ಅಥವಾ ದೇವರ ಮನೆ ಇರುವಂತೆಯೇ ಪ್ರತಿ ಮನೆಯಲ್ಲಿ ಒಂದು ಸಣ್ಣದಾದರೂ ಗ್ರಂಥಾಲಯ ಇರಬೇಕು. ತನ್ಮೂಲಕ ಪುಸ್ತಕ ಓದುವ ಸಂಸತಿ ಮಸ್ತಕದ ಸಂಸ್ಕೃತಿ ಆಗಬೇಕು. ಭಕ್ತಿಯ ಭವನ ಭಯದ ಭವನವಾಗದೆ ಜ್ಞಾನದ ಭವನವಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಆಶಯ ವ್ಯಕ್ತಪಡಿಸಿದರು.
ಕೊಡವೂರಿನ ಭಾಮಾ ನಿಲಯದಲ್ಲಿ ಪುಸ್ತಕ ಪ್ರಾಧಿಕಾರದ 'ಮನೆಗೊಂದು ಗ್ರಂಥಾಲಯ ಅಭಿಯಾನ'ದ ಜಿಲ್ಲಾ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓದುವ ಸಂಸ್ಕೃತಿ ಹುಟ್ಟುಹಾಕಿದ ಕಸಾಪ
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ತಾಲೂಕು ಘಟಕವು ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಾಜ್ಯದ ಗಮನ ಸೆಳೆದಿದೆ. ಎಲ್ಲ ಪದಾಧಿಕಾರಿಗಳ ಶ್ರಮದಿಂದ ಈಗಾಗಲೇ ಅವರು ಮುಂದುವರಿಸಿರುವ "ಮನೆಯೇ ಗ್ರಂಥಾಲಯ' ಅಭಿಯಾನ 110ಕ್ಕೂ ಅಧಿಕ ಮನೆಗಳಲ್ಲಿ ಓದುವ ಸಂಸ್ಕೃತಿ ಹುಟ್ಟುಹಾಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನಾರ್ದನ್ ಕೊಡವೂರು ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಗಾಂಧಿ ಆಸ್ಪತ್ರೆಯ ಸಂಸ್ಥಾಪಕ ಎಂ.ಹರೀಶ್ಚಂದ್ರ, ಡಾ. ರಾಜಲಕ್ಷ್ಮೀ, ಮೋಹನ್ ಉಡುಪ ಇತರರಿದ್ದರು.
ದೀಪಾ ಚಂದ್ರಕಾಂತ್ ಪ್ರಾರ್ಥಿಸಿದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಮತ್ತು ಮನೆಗೊಂದು ಗ್ರಂಥಾಲಯ ಅಭಿಯಾನದ ಜಿಲ್ಲಾ ಸಹ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ್ ಕೊಡವೂರು ಸ್ವಾಗತಿಸಿದರು. ಅಭಿಯಾನದ ಜಿಲ್ಲಾ ಸದಸ್ಯ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.
"
ಬದುಕುವ ಕಲೆ ಪುಸ್ತಕ ಹೇಳಿಕೊಡುತ್ತದೆ. ಪುಸ್ತಕವನ್ನು ಪ್ರೀತಿಸಿದಾಗ ಬದುಕು ಮತ್ತಷ್ಟು ಸುಂದರವಾಗಲಿದೆ. ಹೀಗಾಗಿ 'ಮನೆಗೊಂದು ಗ್ರಂಥಾಲಯ' ಅಭಿಯಾನ ಆರಂಭಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ 'ತಿಂಗಳ ತಿರುಳು' ಕಾರ್ಯಕ್ರಮದ ಮೂಲಕ ಅನೇಕ ಸಾಹಿತಿಗಳು, ಅವರ ಪುಸ್ತಕ ಪರಿಚಯ ಮಾಡಿಕೊಡಲಾಗುತ್ತಿದೆ.