ಕೆಲಸ ಕಳೆದುಕೊಳ್ಳುವ ಭೀತಿಯಿಂದ ನಿರ್ವಾಹಕ ನೇಣಿಗೆ ಶರಣು

ಯೋಗೀಶ್ ಕುಮಾರ್
ಯೋಗೀಶ್ ಕುಮಾರ್
Published on

ಕಾಸರಗೋಡು: ಮುಳಿಯಾರು ಪಂಚಾಯಿತಿ ಮಜಕಾರ್ ನಿವಾಸಿ ಡಿ.ಮಹಾಲಿಂಗ ಪಾಟಾಳಿ ಎಂಬುವರ ಪುತ್ರ ಯೋಗೀಶ್ ಕುಮಾರ್(40) ಎಂಬುವರ ಮೃತದೇಹ, ನೂತನ ಮನೆಯ ಶೆಡ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಾಸರಗೋಡು-ಸುಳ್ಯ ರೂಟ್‌ನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯೋಗೀಶ್ ಕುಮಾರ್ ತಾತ್ಕಾಲಿಕ ನೆಲೆಯಲ್ಲಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಹೊಸ ಮನೆಯ ನಿರ್ಮಾಣ ಕೆಲಸ ಪೂರ್ಣಗೊಳಿಸಿ ಅಲ್ಲಿ ವಾಸ ಆರಂಭಿಸಿದ್ದರು.

ವಿವಾಹದ ಸಿದ್ಧತೆ ನಡೆಸುತ್ತಿದ್ದ ಯೋಗೀಶ್ ಹಾಗೂ ತಾಯಿ ಬೇಬಿ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. 18 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಾತ್ಕಾಲಿಕ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿರ್ವಾಹಕರನ್ನು ಕೆಲಸದಿಂದ ತೆಗೆದುಹಾಕುವ ವದಂತಿ ಹಿನ್ನೆಲೆಯಲ್ಲಿ, ಕೆಲಸ ಕಳೆದುಕೊಳ್ಳಬಹುದೆಂಬ ಭೀತಿಯಿಂದ ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net