ಆಟೋಗಳನ್ನು ಸ್ಟಾೃಂಡ್‌ನಲ್ಲಿ ನಿಲ್ಲಿಸಿ ಚಾಲಕರು ಹೊರಗೆ ತೆರಳಿದ ಸಂದರ್ಭ ಶೈಜು ಜೋಸೆಫ್ ಕಳ್ಳತನ ಮಾಡುತ್ತಿದ್ದ ಬಗ್ಗೆ ಹಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಜು.8ರಂದು ತಲಶ್ಶೇರಿ ಹಳೇ ಬಸ್ ನಿಲ್ದಾಣ ಸಮೀಪ ನಿಲ್ಲಿಸಿದ್ದ ಆಟೋದಿಂದ 8 ಸಾವಿರ ರೂ. ನಗದು ಕಳವಾಗಿದ್ದು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಕಳ್ಳನ ಚಹರೆ ಪತ್ತೆಯಾಗಿತ್ತು. ತನಿಖೆ ನಡೆಸುತ್ತಿದ್ದ ವೇಳೆ ಕಳವು ಮಾಡಲು ಬ ಂದ ಶೈಜು ಜೋಸೆಫ್‌ನನ್ನು ಪೊಲೀಸರು ಸೆರೆ ಹಿಡಿದ್ದಿದ್ದಾರೆ.