ಯಡ್ತಾಡಿ ಗ್ರಾಮದ ಸೈಬರ್ಕಟ್ಟೆ ನಿವಾಸಿ ಭಾಗ್ಯಲಕ್ಷ್ಮೀ ಎಂಬುವರ ಪತಿ ಶ್ರೀನಿವಾಸ ಪೂಜಾರಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೈಕೆಗಾಗಿ ಉಡುಪಿಯಲ್ಲಿರುವ 'ವಿ ಕೇರ್ ಹೋಮ್ ನರ್ಸ್ ಸಂಸ್ಥೆಯನ್ನು ಸಂಪರ್ಕಿಸಿ, 28,000 ರೂ. ಮುಂಗಡ ಹಣ ಪಾವತಿಸಿದ್ದರು. ಸಂಸ್ಥೆಯವರು ಜೂನ್ 25ರಂದು ಸಚಿನ್ ಎಂಬ ಹೋಮ್ ಬ್ರದರ್ನನ್ನು ಕಳುಹಿಸಿಕೊಟ್ಟಿದ್ದರು. ಕೆಲ ದಿನಗಳ ಕಾಲ ಕೆಲಸದಲ್ಲಿದ್ದ ಸಚಿನ್ ಜುಲೈ 7ರಂದು ತುರ್ತು ಕೆಲಸವಿದೆ ಎಂದು ಹೇಳಿ ತನ್ನ ಊರಿಗೆ ತೆರಳಿದ್ದ.