ಸೌಲಭ್ಯಗಳು ಸದುಪಯೋಗ ಆಗಲಿ

 ಬಸ್ರೂರು ಹಿಂದು ವಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಭೋಜನ ಶಾಲೆ ಮತ್ತು ಶೌಚಗೃಹಗಳನ್ನು ಪಿ.ಕೃಷ್ಣಮೂರ್ತಿ ಉದ್ಘಾಟಿಸಿದರು.
ಬಸ್ರೂರು ಹಿಂದು ವಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಭೋಜನ ಶಾಲೆ ಮತ್ತು ಶೌಚಗೃಹಗಳನ್ನು ಪಿ.ಕೃಷ್ಣಮೂರ್ತಿ ಉದ್ಘಾಟಿಸಿದರು.
Published on
ಕುಂದಾಪುರ: ನಿಪ್ಪೋನ್ ಎಕ್ಸ್‌ಪ್ರೆಸ್ ಕಂಪನಿಯ ಸಿಎಸ್‌ಆರ್ ಯೋಜನೆಯಡಿ ಬಸ್ರೂರಿನ ಹಿಂದು ವಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಕಂಪನಿ ಆಡಳಿತ ನಿರ್ದೇಶಕ ಮತ್ತು ಸಿಇಒ ಪಿ.ಕೃಷ್ಣಮೂರ್ತಿ ಹೇಳಿದರು.
ಬಸ್ರೂರು ಶಾಲೆಯಲ್ಲಿ ಕಂಪನಿಯ ಸಿಎಸ್‌ಆರ್ ಯೋಜನೆಯಡಿ 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಭೋಜನ ಶಾಲೆ ಮತ್ತು ಬಾಲಕ, ಬಾಲಕಿಯರ ಪ್ರತ್ಯೇಕ ಶೌಚಗೃಹವನ್ನು ಸೋಮವಾರ ಉದ್ಘಾಟಿಸಿ ವಾತನಾಡಿದರು.
ಶಾಲಾ ಆಡಳಿತ ಮಂಡಳಿ ಸದಸ್ಯೆ ಅನುಪವಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿಪ್ಪೋನ್ ಕಂಪನಿಯ ಕೆನಿಚಿ ಇವಾಮುರ್ ಮಾತನಾಡಿದರು.
ಬಸ್ರೂರು ಗ್ರಾಪಂ ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿ, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರ ನಾಯ್ಕ, ಶಾಲೆ ಹಳೇ ವಿದ್ಯಾರ್ಥಿ ರೇಖಾ ಶೇಷಾದ್ರಿ, ಕೋಣಿ ಸಿಆರ್‌ಪಿ ಸುಮನಾ ನಾಯ್ಕ, ಮುಖ್ಯಶಿಕ್ಷಕ ಕೇಶವ ರಾಥೋಡ್, ಶಾಲೆ ಆಡಳಿತಾಧಿಕಾರಿ ಪ್ರದೀಪ ಕುವಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸುಬ್ಬಣ್ಣ ಕೋಣಿ ಸ್ವಾಗತಿಸಿದರು. ಮಂಜುನಾಥ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸರೋಜಾ ಎಂ. ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net