ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್, ಬೆಳ್ತಂಗಡಿ ತಾಪಂ ವ್ಯವಸ್ಥಾಪಕಿ ನಿಶಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವ್ಯವಸ್ಥಾಪಕ ಪಾರ್ಶ್ವನಾಥ್ ಜೈನ್ ಕಸಗುಡಿಸುವ ಮೂಲಕ ‘ಸ್ವಚ್ಛ ನೇತ್ರಾವತಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಪಿಡಿಒ ಗಾಯತಿ, ವೀರು ಶೆಟ್ಟಿ ಇತರರು ಇದ್ದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್, ಬೆಳ್ತಂಗಡಿ ತಾಪಂ ವ್ಯವಸ್ಥಾಪಕಿ ನಿಶಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವ್ಯವಸ್ಥಾಪಕ ಪಾರ್ಶ್ವನಾಥ್ ಜೈನ್ ಕಸಗುಡಿಸುವ ಮೂಲಕ ‘ಸ್ವಚ್ಛ ನೇತ್ರಾವತಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಪಿಡಿಒ ಗಾಯತಿ, ವೀರು ಶೆಟ್ಟಿ ಇತರರು ಇದ್ದರು.
Published on
ಬೆಳ್ತಂಗಡಿ: ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಬರುವಂತಹ ಕ್ಷೇತ್ರದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಅದರ ನಿರಂತರತೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಧರ್ಮಸ್ಥಳ ಗ್ರಾಪಂ ಪಿಡಿಒ ಗಾಯತ್ರಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ. ಜಿಪಂ, ಬೆಳ್ತಂಗಡಿ ತಾಲೂಕು ಪಂಚಾಯಿತಿ. ಧರ್ಮಸ್ಥಳ ಗ್ರಾಪಂ, ಸ್ವಚ್ಛ ಭಾರತ ಮಿಷನ್, ಶ್ರೀ ಕ್ಷೇತ್ರ ಧರ್ಮಸ್ಥಳ, ರೋಟರಿ, ಲಯನ್ಸ್ ಕ್ಲಬ್, ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನೇತ್ರಾವತಿ ಸ್ನಾನಘಟ್ಟ ಮತ್ತು ನದಿ ಕಿನಾರೆಯಲ್ಲಿ ಗುರುವಾರ ನಡೆದ ಸ್ವಚ್ಛ ನೇತ್ರಾವತಿ ವಿಶೇಷ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್, ಬೆಳ್ತಂಗಡಿ ತಾಪಂ ವ್ಯವಸ್ಥಾಪಕಿ ನಿಶಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವ್ಯವಸ್ಥಾಪಕ ಪಾರ್ಶ್ವನಾಥ್ ಜೈನ್ ಕಸಗುಡಿಸುವ ಮೂಲಕ ‘ಸ್ವಚ್ಛ ನೇತ್ರಾವತಿ’ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.
ಸ್ವಚ್ಛ ನೇತ್ರಾವತಿ ಸ್ನಾನಘಟ್ಟದ ಸೂಚನಾ ಫಲಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವೀರು ಶೆಟ್ಟಿ ಅನಾವರಣಗೊಳಿಸಿ ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸೇರಿ ಸ್ವಚ್ಛತಾ ಅಭಿಯಾನ ನಡೆಸಿದ್ದು ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದಂತಾಗಿದೆ ಎಂದು ಎಂದರು.
ತಾಪಂ ವಿಷಯ ನಿರ್ವಾಹಕರಾದ ಮಂಜು, ಪ್ರಿಯಾ ಹೆಗ್ಡೆ, ಸುಕನ್ಯಾ, ಗ್ರಾಪಂ ಮಾಜಿ ಅಧ್ಯಕ್ಷೆ ವಿಮಲಾ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಯೋಜನಾಧಿಕಾರಿ ಜಯವಂತ್, ಗ್ರಾಪಂ ಕಾರ್ಯದರ್ಶಿ ಪ್ರಮೀಳಾ, ಮಾಹಿತಿ ಕಚೇರಿ ವ್ಯವಸ್ಥಾಪಕ ನಿತಿನ್, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ಗ್ರಾಪಂ ಸ್ವಚ್ಛತಾ ಸಿಬ್ಬಂದಿ, ಕನ್ಯಾಕುಮಾರಿ ಯುವತಿ ಮಂಡಲ, ಶ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರುಗಳು, ಗ್ರಾಮಸ್ಥರು, ಶ್ರೀ ಕ್ಷೇತ್ರ ಧರ್ಮಸ್ಥಳ ಸಿಬ್ಬಂದಿ, ವ್ಯಾಪಾರಸ್ಥರು ಅಭಿಯಾನದಲ್ಲಿ ಪಾಲ್ಗೊಂಡರು.
ದೇವಿಪ್ರಸಾದ್ ಬೊಲ್ಮ ನಿರೂಪಿಸಿದರು. ಪ್ರಮೀಳಾ ವಂದಿಸಿದರು.

ನದಿ ತೀರದಲ್ಲಿದ್ದ ತ್ಯಾಜ್ಯ ತೆರವು

ಪವಿತ್ರ ನೇತ್ರಾವತಿ ನದಿಯ ಸ್ನಾನಘಟ್ಟ ಹಾಗೂ ನದಿ ಕಿನಾರೆಯನ್ನು ಕಸಮುಕ್ತ ಮತ್ತು ಪ್ಲಾಸ್ಟಿಕ್‌ಮುಕ್ತ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು. ‘ಸ್ವಚ್ಛಮೇವ ಜಯತೇ’ ಹಾಗೂ ‘ಸ್ವಚ್ಛ ಭಾರತ - ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ’ ಎಂಬ ಧ್ವೇಯವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ನದಿ ಮೂಲಗಳ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ನೂರಾರು ಸ್ವಯಂಸೇವಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡು ನದಿ ದಂಡೆಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net