ಹೆಜಮಾಡಿಯಲ್ಲಿ ನಡೆದ ಟೋಲ್ ಅಧಿಕಾರಿಗಳ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ನಾಸಿರ್, ಚಂದ್ರಶೇಖರ, ರಾಜ್ ಕುವಾರ್, ತಿಮ್ಮಯ್ಯ ಎ.ಎಸ್., ಅಲೋಕ್ ವಾತಾಡ್, ವ್ನಿೇಶ್, ಇನಾಯತುಲ್ಲ ಬೇಗ್ ಇದ್ದರು.
ಪಡುಬಿದ್ರಿ: ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯವಾಗಿ ಆಗುತ್ತಿರುವ ತೊಂದರೆ ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಮಂಗಳೂರು ಮತ್ತು ಉಡುಪಿ- ಚಿಕ್ಕಮಗಳೂರು ಸಂಸದರ ಜತೆ ಮಾತನಾಡಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಟೋಲ್ ಅಧಿಕಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಎಚ್ಚರಿಕೆ ನೀಡಿದರು.
ಟೋಲ್ ಸಮಸ್ಯೆ ಕುರಿತು ಹೆಜಮಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಅಧಿಕಾರಿಗಳ ಸಭೆಯಲ್ಲಿ ಸ್ಥಳೀಯರ ದೂರುಗಳನ್ನು ಆಲಿಸಿ ಮಾತನಾಡಿದರು.
ವರ್ಷದ ಹಿಂದೆ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರ ಸಹಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಲಾದ ನಿರ್ಣಯವನ್ನು ಪಾಲಿಸದ ಟೋಲ್ ಅಧಿಕಾರಿಗಳ ಕ್ರಮಕ್ಕೆ ಶಾಸಕರು ಅಸವಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸೂಚಿಸಿರುವ ಮೂಲಸೌಕರ್ಯದ ಕಾಮಗಾರಿಗಳನ್ನು ತಿಂಗೊಳೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಗ್ರಾಮಸ್ಥರ ಆಕ್ರೋಶ
ಸ್ಥಳೀಯರ ಬಗ್ಗೆ ತಿಳಿಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಥಳೀಯರಿಗೆ ಟೋಲ್ ವಿನಾಯಿತಿ ಇದ್ದರೂ ಟೋಲ್ ಕಡಿತಗೊಳಿಸುತ್ತಿದ್ದಾರೆ. ವಿನಾಯಿತಿ ನೀಡಿದ ಸ್ಥಳೀಯ ಟೋಲ್ ಸಿಬ್ಬಂದಿ ಸಂಬಳದಿಂದ ಹಣ ಕಡಿತಗೊಳಿಸಲಾಗುತ್ತಿದೆ. ಈ ಮೂಲಕ ಸ್ಥಳೀಯ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಶರಣ್ ಕುವಾರ್ ಮಟ್ಟು, ಪಾಂಡುರಂಗ ಕರ್ಕೇರ, ಸುಧಾಕರ ಕರ್ಕೇರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನ ಸೈಟ್ ಇಂಜಿನಿಯರ್ ನಾಸಿರ್, ತಾಂತ್ರಿಕ ವ್ಯವಸ್ಥಾಪಕ ಚಂದ್ರಶೇಖರ, ವ್ಯವಸ್ಥಾಪಕ ರಾಜ್ ಕುವಾರ್, ಟೋಲ್ ವ್ಯವಸ್ಥಾಪಕ ತಿಮ್ಮಯ್ಯ ಎ.ಎಸ್., ರೆಸಿಡೆಂಟ್ ಇಂಜಿನಿಯರ್ ಅಲೋಕ್ ವಾತಾಡ್, ಸಹಾಯಕ ಇಂಜಿನಿಯರ್ ವ್ನಿೇಶ್, ಹೆಜವಾಡಿ ಪಿಡಿಒ ಇನಾಯತುಲ್ಲ ಬೇಗ್ ಉಪಸ್ಥಿತರಿದ್ದರು.