ಆಟಿ ಆಹಾರದಲ್ಲಿ ಔಷಧೀಯ ಗುಣ: ಸೊರಕೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್​ ಸೊರಕೆ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್​ ಸೊರಕೆ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದರು.
Published on
ಉಡುಪಿ: ಭಾರತ ಕೃಷಿ ಪ್ರಾಧಾನ್ಯ ದೇಶವಾಗಿದ್ದು, ಶೇ. 80ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದರು. ಹಿಂದಿನ ಕಾಲದಲ್ಲಿ ಜೂನ್​ ಮತ್ತು ಜುಲೈ ತಿಂಗಳು ಕಷ್ಟದ ದಿನವಾಗಿದ್ದು, ಪ್ರಕೃತಿಯನ್ನು ದೊರೆಯುವ ಆಹಾರ ಸೇವಿಸುವ ಸಂಪ್ರದಾಯವಿತ್ತು. ಆಟಿ ಆಹಾರಗಳಲ್ಲಿ ಔಷಧೀಯ ಗುಣವಿದ್ದು, ಈ ಉತ್ಕ್ರಷ್ಟ ಆಹಾರ ಪದ್ಧತಿಯನ್ನು ಪಂಚತಾರಾ ಹೋಟೆಲ್​ಗಳು ಕೂಡ ಗುರುತಿಸಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್​ ಸೊರಕೆ ಹೇಳಿದರು,

ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಮಹಿಳಾ ಕಾಂಗ್ರೆಸ್​ ಸಮಿತಿ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಆಚಾರ&ವಿಚಾರಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕು. ಆಟಿ ತಿಂಗಳಲ್ಲಿ ಕೃಷಿಗೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳು ನಡೆಯುತ್ತವೆ. ಕೆಸರಿನಲ್ಲಿ ಒಂದು ದಿನ, ಆಟಿ ಕೂಟ ಮುಂತಾದ ಆಚರಣೆಗಳನ್ನು ಎಳೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

"

ಮಹಿಳಾ ಕಾಂಗ್ರೆಸ್​ ಸದಸ್ಯೆಯರು ಪ್ರತಿ ಬೂತ್​ ಮಟ್ಟದಲ್ಲಿ ಕನಿಷ್ಠ 15 ಮಂದಿ ಸದಸ್ಯರನ್ನು ಒಳಗೊಂಡ ಗೃಹಲಕ್ಷ್ಮೀ ಸ್ವ-ಸಹಾಯ ಸಂಗಳನ್ನು ರಚಿಸಬೇಕು. ಪ್ರತಿ ಸಂಕ್ಕೆ ಸರ್ಕಾರ 1.5 ಲಕ್ಷ ರೂ. ಅನುದಾನ ನೀಡಲಿದೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಕನಿಷ್ಠ 100 ಯುವಕರನ್ನು ಒಳಗೊಂಡ ಭಾರತ್​ ಜೋಡೋ ಸಂ ಸ್ಥಾಪಿಸಲಾಗುತ್ತಿದ್ದು, ಸರ್ಕಾರ 10 ಲಕ್ಷ ರೂ. ಅನುದಾನ ನೀಡಲಿದೆ. ಇದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ.

— ವಿನಯಕುಮಾರ್​ ಸೊರಕೆ, ಅಧ್ಯಕ್ಷರು, ಕೆಪಿಸಿಸಿ ಪ್ರಚಾರ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net