ಮಹಾಲಕ್ಷ್ಮೀ ಶೆಣೈಗೆ ಕೇಂದ್ರ ಸಂಗೀತ ಅಕಾಡೆಮಿ ಪುರಸ್ಕಾರ

ಸಂಗೀತ ವಿದುಷಿ ಮಹಾಲಕ್ಷ್ಮೀ ಶೆಣೈ
ಸಂಗೀತ ವಿದುಷಿ ಮಹಾಲಕ್ಷ್ಮೀ ಶೆಣೈ
Published on
ಉಡುಪಿ: ಕಾರ್ಕಳದ ಸಂಗೀತ ವಿದುಷಿ ಮಹಾಲಕ್ಷ್ಮೀ ಶೆಣೈ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2024-25ನೇ ಸಾಲಿನ ಉಸ್ತಾದ್​ ಬಿಸ್ಮಿಲ್ಲಾ ಖಾನ್​ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅಕಾಡೆಮಿ ಪ್ರಶಸ್ತಿ ಗಳಿಸಿದ ಮೊದಲ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

3ನೇ ವಯಸ್ಸಿಗೆ ಸಂಗೀತಲೋಕಕ್ಕೆ ಪಾದಾರ್ಪಣೆಗೈದ 38 ವರ್ಷದ ಈ ಯುವ ಸಾಧಕಿ 20 ವರ್ಷಗಳಿಂದ 1500ಕ್ಕೂ ಅಧಿಕ ಸಂಗೀತ ಕಛೇರಿ ನೀಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅವರ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ. ಇವರು ಸಂಗೀತ ಲೋಕದ ದಿಗ್ಗಜ ಪಂಡಿತ್​ ವಿಶ್ವಮೋಹನ್​ ಭಟ್​ ಶಿಷ್ಯೆಯಾಗಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆಗೆ ಭರತನಾಟ್ಯದಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ.

ಆಕಾಶವಾಣಿ ಎ ಗ್ರೇಡ್​ ಕಲಾವಿದೆಯಾಗಿದ್ದಾರೆ. ಎಂಎಸ್​ಡಬ್ಲ್ಯು, ಎಂಎಸ್​ ಪದವಿಧರೆಯಾಗಿರುವ ಇವರು ಉದಯಪುರ ಎಂಎಲ್​ಸಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸಂಗೀತದಲ್ಲಿ ಎಂಎ ಪದವಿ ಗಳಿಸಿದ್ದಾರೆ. ಉಡುಪಿ ಜಿಲ್ಲಾ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕೊಂಕಣಿ ಅಕಾಡೆಮಿಯ ಕೊಂಕಣಿ ನಕ್ಷತ್ರ ಯುವಸಾಧಕಿ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
"

ಕಾರ್ಕಳದ ಕಾಶೀ ಮಠದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಹಾಡುವಾಗ ಗುರುಗಳಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಹರಸಿದ್ದು, ಅವರ ಪ್ರೇರಣೆಯಿಂದಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದ್ದು, ಸಣ್ಣ ಸಾಧನೆಯನ್ನು ಸರ್ಕಾರ ಗುರುತಿಸಿರುವುದು ಸಂತಸ ತಂದಿದೆ.

— ಮಹಾಲಕ್ಷ್ಮೀ ಶೆಣೈ, ಸಂಗೀತ ಕಲಾವಿದೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net