ಕಾಸರಗೋಡು: ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಏ.14ರಿಂದ 18ರವರೆಗೆ ಜರುಗಲಿದೆ. 14ರಂದು ಬೆಳಗ್ಗೆ 6.30ಕ್ಕೆ ವೇದ ಪಾರಾಯಣ, 9ಕ್ಕೆ ಧ್ವಜಾರೋಹಣ, 10ಕ್ಕೆ ಸಹಸ್ರ ಕುಂಭಾಭಿಷೇಕ, 12ಕ್ಕೆ ತುಲಾಭಾರ ಸೇವೆ, ಮಹಾಪೂಜೆ ನಡೆಲಿದೆ. ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, ರಾತ್ರಿ 9ಕ್ಕೆ ಉತ್ಸವ, ಬಲಿ ನಡೆಯಲಿದೆ. 15ರಂದು ಬೆಳಗ್ಗೆ 5ಕ್ಕೆ ವಿಶೇಷೋತ್ಸವ, ವಿಷುಕಣಿಯ ವಿಶೇಷಬಲಿ, ರಾಜಾಂಗಣ ಪ್ರಸಾದ, ಬೆಳಗ್ಗೆ ಪಂಚವಾದ್ಯ, ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆ, ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, ರಾತ್ರಿ 9ಕ್ಕೆ ಉತ್ಸವ ಬಲಿ ನಡೆಯುವುದು. 16ರಂದು ಬೆಳಗ್ಗೆ 5ಕ್ಕೆ ವಿಶೇಷೋತ್ಸವ, ಉತ್ಸವ ಬಲಿ, ಮಧ್ಯಾಹ್ನ ತುಲಾಭಾರ ಸೇವೆ, ಸಂಜೆ ತಾಯಂಬಕ, ವೀಣಾರಾಧನೆ, ರಾತ್ರಿ 8ಕ್ಕೆ ಮಹಾದೀಪೋತ್ಸವ, ಉತ್ಸವ ಬಲಿ, ಸೇವೆ ಸುತ್ತುಗಳು ನೆರವೇರಲಿವೆ.