ಮಧು ಮಾಸದ ಸಂಜೆಯಲಿ ನಾದ-ಗಾನದ ಹೊನಲು

ಉಡುಪಿಯಲ್ಲಿ ಆಯೋಜಿಸಿದ್ದ ಮಧುಮಾಸದ ಸಂಜೆ ಸಂಗೀತ ಕಾರ್ಯಕ್ರಮವನ್ನು ಎಂ.ನಾರಾಯಣ ಹೆಗಡೆ ಉದ್ಘಾಟಿಸಿದರು. ಪ್ರೊ. ಎಂ.ಎಲ್​. ಸಾಮಗ, ಸತೀಶ್​ ಕುಮಾರ್​ ಕೆಮ್ಮಣ್ಣು, ತುಳಸೀದಾಸ್​ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಮಧುಮಾಸದ ಸಂಜೆ ಸಂಗೀತ ಕಾರ್ಯಕ್ರಮವನ್ನು ಎಂ.ನಾರಾಯಣ ಹೆಗಡೆ ಉದ್ಘಾಟಿಸಿದರು. ಪ್ರೊ. ಎಂ.ಎಲ್​. ಸಾಮಗ, ಸತೀಶ್​ ಕುಮಾರ್​ ಕೆಮ್ಮಣ್ಣು, ತುಳಸೀದಾಸ್​ ಇದ್ದರು.
Published on

ಐವೈಸಿ ಸಭಾಂಗಣದಲ್ಲಿ ಸಂಗೀತ, ಸಾಹಿತ್ಯ ಪರ್ವ

ಉಡುಪಿ: ಕರ್ನಾಟಕ ಗಮಕ ಕಲಾ ಪರಿಷತ್​ ಉಡುಪಿ ಜಿಲ್ಲಾ ಘಟಕ ಮತ್ತು ಅಭಿಜ್ಞಾನ ಕಲಾಧಾಮ ಸಹಯೋಗದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್​ ಸಭಾಂಗಣದಲ್ಲಿ ಇತ್ತೀಚೆಗೆ ಮಧುಮಾಸದ ಸಂಜೆ (ಸಾಹಿತ್ಯ, ಸಂಗೀತ, ಭಾವಪರ್ವ) ಕಾರ್ಯಕ್ರಮ ನಡೆಯಿತು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಂ.ನಾರಾಯಣ ಹೆಗಡೆ ಉದ್ಘಾಟಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್​ ಉಡುಪಿ ಜಿಲ್ಲಾಧ್ಯಕ್ಷ ಸತೀಶ್​ ಕುಮಾರ್​ ಕೆಮ್ಮಣ್ಣು, ಅಭಿಜ್ಞಾನ ಕಲಾಧಾಮದ ತುಳಸೀದಾಸ್​ ಉಪಸ್ಥಿತರಿದ್ದರು. 

ಸಂಗೀತ ಕಾರ್ಯಕ್ರಮ

ವಿದ್ವಾನ್​ ನಟರಾಜ್​ ಎಚ್​.ಎನ್​. ಅವರು ಕೆ.ಎಸ್​. ನರಸಿಂಹಸ್ವಾಮಿ ರಚಿತ ಕವಿತೆ ಸಹಿತ 'ವಸಂತ ಗೀತೆ'ಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶರತ್​ ಕುಮಾರ್​ ನಾಡ ಹಿಂದೂಸ್ಥಾನಿ ಸಂಗೀತದಲ್ಲಿ ರಾಗ್​ ಮಧುವಂತಿಯಿಂದ ಆರಂಭಿಸಿ ವಿವಿಧ ಭಜನೆ ಪ್ರಸ್ತುತಪಡಿಸಿದರು. ಹಾಮೋರ್ನಿಯಂನಲ್ಲಿ ಪ್ರಣಾದ್​ ರಾವ್​, ತಬಲಾದಲ್ಲಿ ಶಶಿಕಿರಣ್​ ಮಣಿಪಾಲ ಸಾಥ್​ ನೀಡಿದರು.

ಸಾಹಿತ್ಯ ಪರ್ವ

ಪಲ್ಲವಿ ಕೆದ್ಲಾಯ ಅವರು 'ಶ್ರೀರಾಮ ನಿರ್ಯಾಣ'ದ ಗಮಕ ವಾಚನ ಹಾಗೂ ಡಾ.ರಾಘವೇಂದ್ರ ರಾವ್​ ವ್ಯಾಖ್ಯಾನ ಮಾಡಿದರು. ಸಂಗೀತ ಕ್ಷೇತ್ರದ ಸಾಧಕರಾದ ತುಳಸೀದಾಸ್​, ಗಮಕ ಕಲಾವಿದೆ ಉಮಾ ಮಂಜುನಾಥ್​, ಹಿಂದೂಸ್ಥಾನಿ ಉದಯೋನ್ಮುಖ ಕಲಾವಿದ ಶರತ್​ ಕುಮಾರ್​ ನಾಡ ಅವರನ್ನು ಗೌರವಿಸಲಾಯಿತು. 
ಜಾಹ್ನವಿ ಪ್ರಾರ್ಥಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್​ ಉಡುಪಿ ತಾಲೂಕು ಅಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ ಸ್ವಾಗತಿಸಿದರು. ಸಂಸ್ಕೃತಿ ಪ್ರಭಾಕರ್​, ಸಂಹಿತಾ ಜಿ.ಪಿ. ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಕುಮಾರ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net