ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಪ್ರಯೋಗ ಉಪಕರಣಗಳನ್ನು ಎಂ.ಎ. ಗಫೂರ್ ಉದ್ಘಾಟಿಸಿದರು. ಪೂರ್ಣಿಮಾ, ರೂಪಶ್ರೀ ರತ್ನಾಕರ್, ಜಗದೀಶ್ ಕುಮಾರ್, ಡಾ.ಯಲ್ಲಮ್ಮ, ಯೋಗಾನರಸಿಂಹ ಸ್ವಾಮಿ, ಇಂದಿರಾ ಬಿ. ಇದ್ದರು.
Published on:
Copied
Follow Us
* ಎಂ.ಎ. ಗಫೂರ್ ಅಭಿಪ್ರಾಯ
* ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳೂ ಸಹ ಬೌದ್ಧಿಕ, ಮಾನಸಿಕವಾಗಿಯೂ ಸಮರ್ಥರಿದ್ದಾರೆ. ಅವರಿಗೆ ಸೂಕ್ತ ಅನುಕೂಲ ಮತ್ತು ಅವಕಾಶ ಒದಗಿಸಿಕೊಟ್ಟಲ್ಲಿ ಅವರೂ ಉನ್ನತ ಸಾಧನೆ ಮಾಡಬಲ್ಲರು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅಭಿಪ್ರಾಯಪಟ್ಟರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಣಿಪಾಲ್ ಪೇಮೆಂಟ್ ಆ್ಯಂಡ್ ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ವತಿಯಿಂದ ಸುನಿಧಿ ಫೌಂಡೇಶನ್ ಟ್ರಸ್ಟ್ ಮೂಲಕ ಕೊಡುಗೆಯಾಗಿ ನೀಡಿದ 2 ಲಕ್ಷ ರೂ. ಮೌಲ್ಯದ ವಿವಿಧ ವಿಜ್ಞಾನ ಪ್ರಯೋಗ ಉಪಕರಣಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸುನಿಧಿ ಫೌಂಡೇಷನ್ನ ರೂಪಶ್ರೀ ರತ್ನಾಕರ್, ಪ್ರಾಂಶುಪಾಲ ಜಗದೀಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ, ಡಯಟ್ ಉಪನ್ಯಾಸಕ ಯೋಗಾನರಸಿಂಹ ಸ್ವಾಮಿ, ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ. ಮತ್ತು ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.
"
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ, ಸೂಕ್ತ ಸೌಲಭ್ಯ ಇರಬೇಕು. ಆದರೆ, ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷೆ ಮಾಡುವುದು ಕಷ್ಟ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ-ಸಂಸ್ಥೆಗಳೂ ಕೂಡ ಶಾಲೆಗಳಿಗೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ.