ಅಧರ್ಮ, ಅನೀತಿ ವಿನಾಶಕ ಭಗವಾನ್​ ಶ್ರೀಕೃಷ್ಣ

ಉಡುಪಿಯ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ರೀಕೃಷ್ಣ ಜಯಂತಿಯನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ದಿನಕರ್​ ಹೇರೂರು, ಎಸ್​.ಎಸ್​. ಕಾದ್ರೋಳ್ಳಿ, ಪೂರ್ಣಿಮಾ, ಡಾ. ಶ್ರೀಕಾಂತ್​ ಸಿದ್ಧಾಪುರ, ಸುಬ್ರಹ್ಮಣ್ಯ ಶೆಟ್ಟಿ, ಕೆ.ಪೂರ್ಣಿಮಾ ಇದ್ದರು.
ಉಡುಪಿಯ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ರೀಕೃಷ್ಣ ಜಯಂತಿಯನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ದಿನಕರ್​ ಹೇರೂರು, ಎಸ್​.ಎಸ್​. ಕಾದ್ರೋಳ್ಳಿ, ಪೂರ್ಣಿಮಾ, ಡಾ. ಶ್ರೀಕಾಂತ್​ ಸಿದ್ಧಾಪುರ, ಸುಬ್ರಹ್ಮಣ್ಯ ಶೆಟ್ಟಿ, ಕೆ.ಪೂರ್ಣಿಮಾ ಇದ್ದರು.
Published on

* ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಭಿಮತ

* ವಳಕಾಡು ಪ್ರೌಢಶಾಲೆಯಲಿ ಜಿಲ್ಲಾ ಮಟ್ಟದ ಜಯಂತಿ ಉದ್ಘಾಟನೆ

ಉಡುಪಿ: ಉಡುಪಿಯು ಶ್ರೀಕೃಷ್ಣನ ನಾಡು. ಇಲ್ಲಿನ ಜನತೆಗೆ ಜನ್ಮಾಷ್ಟಮಿ  ಬಹುದೊಡ್ಡ ಹಬ್ಬ. ಈ ದಿನ ಕೃಷ್ಣನಗರಿಯಲ್ಲಿ ಸಂಭ್ರಮದ ಪ್ರವಾಹವಿರುತ್ತದೆ. ವಿವಿಧ ವೇಷಧಾರಿಗಳು ಹಬ್ಬಕ್ಕೆ ಮೆರುಗು ನೀಡುತ್ತಾರೆ. ಕಲೆ, ಸಂಸ್ಕೃತಿ ಉಳಿದಾಗ ಸಾಮರಸ್ಯದಿಂದ ಬದುಕಲು ಸಾಧ್ಯ ಎನ್ನುವುದಕ್ಕೆ ಜನ್ಮಾಷ್ಟಮಿ ನಿದರ್ಶನ. 8ನೇ ಅವತಾರವಾಗಿ ಜನಿಸಿ ಅಧರ್ಮ, ಅನೀತಿಗಳನ್ನು ವಿನಾಶಗೊಳಿಸಿದ ಮಹಾನ್​ ಚೇತನ ಭಗವಾನ್​ ಶ್ರೀಕೃಷ್ಣನಾಗಿದ್ದಾನೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಹೇಳಿದರು.
ಉಡುಪಿಯ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಶುಕ್ರವಾರ (ಸೆ.4) ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಷ್ಟರ ರಕ್ಷಣೆ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು ಮಾತನಾಡಿ, ಶ್ರೀಕೃಷ್ಣನ ಜನ್ಮದಿನದವನ್ನು ದೇಶಾದ್ಯಂತ ಅತ್ಯಂತ ಭಕ್ತಿಯಿಂದ ಆಚರಿಸುತ್ತಾರೆ. ಉಡುಪಿಯಲ್ಲಿ ಎರಡು ದಿನ ವೈಶಿಷ್ಟ್ಯಮಯವಾಗಿ ಆಚರಿಸಲಾಗುತ್ತದೆ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಸಲು ಅವತಾರವೆತ್ತಿ ಬಂದ ಕೃಷ್ಣನು, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತು ಧರ್ಮಕ್ಕೆ ಜಯತಂದುಕೊಟ್ಟ ಆದರ್ಶ ಪುರುಷನಾಗಿದ್ದಾನೆ ಎಂದರು.

ಉಪನ್ಯಾಸ

ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ್​ ಸಿದ್ಧಾಪುರ ಉಪನ್ಯಾಸ ನೀಡಿ, ಕೃಷ್ಣ ಜನ್ಮವೃತ್ತಾಂತ, ದಶಾವತಾರ ಮಾಹಿತಿ ನೀಡಿದರು. ಜಗದಲ್ಲಿ ಅಧರ್ಮ ಉಂಟಾದಾಗ ಮತ್ತೆ ಜನಿಸಿ ಬರುತ್ತೇನೆಂದು (ಸಂಭವಾಮಿ ಯುಗೇ ಯುಗೇ) ಶ್ರೀಕೃಷ್ಣ ತಿಳಿಸಿದ್ದಾನೆ. ಕಲಿಯುಗದಲ್ಲಿಯೂ ಪ್ರಭಾವ ಹೊಂದಿರುವ ದೇವರು ಶ್ರೀಕೃಷ್ಣನಾಗಿದ್ದಾನೆ ಎಂದರು.
ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಶಾಲೆಯ ಅಧ್ಯಾಪಕರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಕೆ.ಪೂರ್ಣಿಮಾ ವಂದಿಸಿದರು.
"

ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ಆದರ್ಶ, ಸಲಹೆ, ಮಾರ್ಗದರ್ಶನಗಳು ಭಗವದ್ಗೀತೆಯಲ್ಲಿದೆ. ಅದನ್ನು ಅರಿತು ನಡೆದರೆ ಜೀವನ ಸಾರ್ಥಕವಾಗುತ್ತದೆ. ಮಕ್ಕಳು ಗೀತೆಯನ್ನು ಓದಬೇಕು. ಅದರಿಂದ ಅವರ ಶೈಕ್ಷಣಿಕ ಬದುಕಿನಲ್ಲಿ ಸಾಧನೆ ಸುಲಭವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net