ಉಡುಪಿ: ರಾಜನಾಗಿ, ಋಷಿಯಾಗಿ ಭಗೀರಥ ಅವರು ಸಮಾಜಕ್ಕೆ ಪರಿಶ್ರಮದ ದೊಡ್ಡ ಸಂದೇಶ ನೀಡಿದ್ದಾರೆ. ಪರಿಶ್ರಮ ಹಾಗೂ ಶ್ರೇಷ್ಠ ಪ್ರಯತ್ನದಿಂದ ಗಂಗೆಯನ್ನೇ ಧರೆಗೆ ತಂದವರು. ಅವರ ತಪಸ್ಸು ಹಾಗೂ ಪರಿಶ್ರಮದ ರೀತಿ ಎಲ್ಲರ ಬದುಕಿಗೆ ಮಾದರಿಯಾಗಿದೆ. ಅವರ ಮನೋಭಾವವನ್ನು ನಮ್ಮ ದುಡಿಮೆ ಮತ್ತು ನಿತ್ಯದ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಕರೆ ನೀಡಿದರು.