ಗ್ರಾಹಕರ ಅಗತ್ಯತೆ ಪೂರೈಸುವುದೇ 'ಹರ್ಷ' ಧ್ಯೇಯ

ಉಡುಪಿಯ ಷರ್ಹ ಮಳಿಗೆಯಲ್ಲಿ ಏಥರ್​ ಬೈಕ್​ ವಿಜೇತರನ್ನು ಆಯ್ಕೆ ಮಾಡಲಾಯಿತು. ಸಿದ್ಧಾರ್ಥ ಪ್ರಭು, ಸಮೃದ್ಧ್​ ಪ್ರಕಾಶ್​, ರಾನ್ಸನ್​ ಡಿಸೋಜ, ಶ್ರೀವತ್ಸ ಬಲ್ಲಾಳ್​, ಅಭಿನ್​ ಪೂಜಾರಿ ಹಾಗೂ ಗ್ರಾಹಕರು ಇದ್ದರು.
ಉಡುಪಿಯ ಷರ್ಹ ಮಳಿಗೆಯಲ್ಲಿ ಏಥರ್​ ಬೈಕ್​ ವಿಜೇತರನ್ನು ಆಯ್ಕೆ ಮಾಡಲಾಯಿತು. ಸಿದ್ಧಾರ್ಥ ಪ್ರಭು, ಸಮೃದ್ಧ್​ ಪ್ರಕಾಶ್​, ರಾನ್ಸನ್​ ಡಿಸೋಜ, ಶ್ರೀವತ್ಸ ಬಲ್ಲಾಳ್​, ಅಭಿನ್​ ಪೂಜಾರಿ ಹಾಗೂ ಗ್ರಾಹಕರು ಇದ್ದರು.
Published on

* ಮರ್ಚಂಡೈಸಿಂಗ್​ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಪ್ರಭು ಭರವಸೆ 

* 'ಮೈ ಫ್ರೀಡಂ ಸೇಲ್​' ಸ್ಕೀಮ್​ನ 10 ಏಥರ್​ ಬೈಕ್​ ಅದೃಷ್ಟ ವಿಜೇತರ ಆಯ್ಕೆ

ಉಡುಪಿ: ಸ್ವಾತಂತ್ರ್ಯೋತ್ಸವವನ್ನು ಹರ್ಷ ಗ್ರಾಹಕರೊಂದಿಗೆ ಸಂಭ್ರಮದಿಂದ ಆಚರಿಸುವಂತಾಗಲು ಈ ಬಾರಿ ರಾಜ್ಯಾದ್ಯಂತ ಇರುವ 22 ಮಳಿಗೆಗಳಲ್ಲಿ ಆ.8ರಿಂದ ಆ.31ರ ವರೆಗೆ 'ಮೈ ಫ್ರೀಡಂ ಸೇಲ್​' ಯೋಜನೆ ಮೂಲಕ ಏಥರ್​ ಕಂಪನಿಯ 10 ಇಲೆಕ್ಟ್ರಿಕ್​ ಬೈಕ್​ ಗೆಲ್ಲುವ ಸದವಕಾಶ ಇಡಲಾಗಿತ್ತು. 15 ಸಾವಿರ ರೂ.ಗಿಂತ ಅಧಿಕ ಮೌಲ್ಯದ ವಸ್ತು ಖರೀದಿಸುವ ಈ ಹಷೋರ್ತ್ಸವದಲ್ಲಿ ಪಾಲ್ಗೊಂಡಿದ್ದ 35 ಸಾವಿರಕ್ಕೂ ಅಧಿಕ ಜನರಿಗೆ ಲಕ್ಕಿ ಕೂಪನ್​ ನೀಡಲಾಗಿತ್ತು. ಗ್ರಾಹಕರು ಬಯಸಿದ ಉತ್ಪನ್ನ, ಅಗತ್ಯತೆ ಪೂರೈಸುವುದು ನಮ್ಮ ಧ್ಯೇಯವಾಗಿದೆ ಎಂದು ಹರ್ಷ ಸಂಸ್ಥೆಯ ಮರ್ಚಂಡೈಸಿಂಗ್​ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಪ್ರಭು ತಿಳಿಸಿದರು.
ಉಡುಪಿಯ ಸಿಟಿ ಬಸ್​ ನಿಲ್ದಾಣ ಸಮೀಪದಲ್ಲಿರುವ ಜನರ ಅಚ್ಚುಮೆಚ್ಚಿನ ಗೃಹೋಪಕರಣಗಳ ಮಳಿಗೆಯಾದ ಹರ್ಷ ಮಳಿಗೆಯಲ್ಲಿ ಶನಿವಾರ (ಸೆ.19) ಸಂಜೆ ಆಯೋಜಿಸಿದ್ದ ಏಥರ್​ ಬೈಕ್​ ಅದೃಷ್ಟ ವಿಜೇತರ (ಲಕ್ಕಿ ಡ್ರಾ) ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಹಕರಿಂದಲೇ ಕೂಪನ್​ ಆಯ್ಕೆ
ರಾಜ್ಯದ ಎಲ್ಲ 22 ಮಳಿಗೆ (8 ಜೋನ್​)ಗಳಲ್ಲಿನ ಲಕ್ಕಿ ಕೂಪನ್​ಗಳನ್ನು ಉಡುಪಿಯ ಹರ್ಷ ಮಳಿಗೆಯಲ್ಲಿ ಗ್ರಾಹಕರಿಂದಲೇ ಬೈಕ್​ನ ಲಕ್ಕಿ ಕೂಪನ್​ ತೆಗೆಯುವ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.  
ಹರ್ಷ ಸಂಸ್ಥೆಯ ಕಾರ್ಯನಿರ್ವಹಣಾ ವಿಭಾಗದ ಮುಖ್ಯಸ್ಥ ಸಮೃದ್ಧ್​ ಪ್ರಕಾಶ್​, ಹರ್ಷ ಕ್ಲಸ್ಟರ್​ ಮ್ಯಾನೇಜರ್​ ರಾನ್ಸನ್​ ಡಿಸೋಜ, ಮಾರುಕಟ್ಟೆ ವಿಭಾಗದ ಎಜಿಎಂ ಶ್ರೀವತ್ಸ ಬಲ್ಲಾಳ್​, ಉಡುಪಿ ಸ್ಟೋರ್​ ಮ್ಯಾನೇಜರ್​ ಅಭಿನ್​ ಪೂಜಾರಿ ಉಪಸ್ಥಿತರಿದ್ದರು. ಅವಿನಾಶ್​ ಕಾಮತ್​ ಕಾರ್ಯಕ್ರಮ ನಿರೂಪಿಸಿದರು.

10 ಸ್ಕೂಟರ್​ ವಿಜೇತರ ಮಾಹಿತಿ

ಗ್ರಾಹಕರ ಹೆಸರು                            ಮಳಿಗೆ                          ಕೂಪನ್​ ಸಂಖ್ಯೆ
ಪ್ರತಿಮಾ                                     ಬೆಂಗಳೂರು-2                       20460
ಲಕ್ಷ್ಮೀದೇವಿ                                  ಶಿವಮೊಗ್ಗ                              9383
ಮಹಾಂತ ಇಂಡಸ್ಟ್ರೀಸ್​                   ಕಲಬುರಗಿ                             19424
ಯಲ್ಲಪ್ಪ ಕಡಪ್ಪನವರ್​                     ಧಾರವಾಡ                             15217
ಸತೀಶ್​ ಶೆಟ್ಟಿ                               ಕುಂದಾಪುರ                            27166
ರೈಜಾ ಎಂ.                                 ಸುರತ್ಕಲ್​                              18534
ಕೃತಿಕಾ ಬಿ. ನಾಯರ್​                     ಮಂಗಳೂರು (ಫಲ್ನೀರ್​)              1748
ಮೊಹಮ್ಮದ್​ ಕೆ. ಮನ್ಸೂರ್​              ಮಂಗಳೂರು-3                         55239
ಗಿಲ್ಬರ್ಟ್​ ಮಸ್ಕರೇನಸ್​.                  ಉಡುಪಿ-3                              31578
ಆಯಿಷಾ ಎಂ.                              ಉಡುಪಿ-1                              22697
"

ಏಥರ್​ ಬೈಕ್​ ಗೆದ್ದ ಹರ್ಷದ ಎಲ್ಲ ಗ್ರಾಹಕರಿಗೆ ಅಭಿನಂದನೆ. ಹರ್ಷದಲ್ಲಿ ಅಗತ್ಯ ವಸ್ತು ಖರೀದಿಸಿ ಹರ್ಷಗೊಂಡಿದ್ದೀರಿ ಎಂದು ಭಾವಿಸುತ್ತೇನೆ. ಗ್ರಾಹಕರೆಲ್ಲರ ಸಹಕಾರ, ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಹರ್ಷದ ಗ್ರಾಹಕರು ಇಂತಹ ಬಹುಮಾನ ಇನ್ನಷ್ಟು ಪಡೆಯುವಂತಾಗಲಿ ಎಂದು ಹರ್ಷದ ವತಿಯಿಂದ ಆಶಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net