ಲಾರಿ-ಟೆಂಪೋ ಡಿಕ್ಕಿ, ಚಾಲಕ ಗಂಭೀರ

 ಅಪಘಾತದಲ್ಲಿ ಪಲ್ಟಿಯಾಗಿರುವ ಗೂಡ್ಸ್ ಟೆಂಪೋ.
ಅಪಘಾತದಲ್ಲಿ ಪಲ್ಟಿಯಾಗಿರುವ ಗೂಡ್ಸ್ ಟೆಂಪೋ.
Published on

ಬಂಟ್ವಾಳ: ಲಾರಿ ಹಾಗೂ ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡ ಟನೆ ಮಂಗಳವಾರ ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ನಡೆದಿದೆ.

ಕಂದೂರಿನಲ್ಲಿ ಕೋಸ್ಟಲ್ ಫಾರ್ಮ್‌ಗೆ ಹೋಗುತ್ತಿದ್ದ ಗೂಡ್ಸ್ ಟೆಂಪೋ ಕಂದೂರಿನಲ್ಲಿ ತಿರುವು ಪಡೆಯುತ್ತಿದ್ದ ವೇಳೆ ಹಿಂಭಾಗದಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗೂಡ್ಸ್ ಟೆಂಪೋ ಉರುಳಿ ಬಿದ್ದಿದೆ. ಲಾರಿ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳಿಕ ಕ್ರೇನ್ ಮೂಲಕ ಟೆಂಪೋ ಹಾಗೂ ಲಾರಿಯನ್ನು ತೆರವುಗೊಳಿಸಲಾಯಿತು. ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net