ಆಂಧ್ರಪ್ರದೇಶ ಮೂಲದ ಲಾರಿ ಇದಾಗಿದೆ. ಲಾರಿ ಚಾಲಕ, ನಿರ್ವಾಹಕ, ಮತ್ತೊಬ್ಬರನ್ನು ಗುರುಪುರದ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಕೆಲವು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಪರಿಣಾಮ ಗುರುಪುರ ಆಸುಪಾಸಿನಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಸುಗಮ ವಾಹನ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಕೆಲವು ವಾಹನಗಳು ಬಂಡಸಾಲೆ ಒಳರಸ್ತೆ ಮೂಲಕ ಗುರುಪುರ ಕೈಕಂಬ, ಮಂಗಳೂರಿನತ್ತ ಸಂಚರಿಸಿದವು.