ಗ್ರಾಮೀಣ ಜನರಿಗೂ ಸಿಗಲಿ ಉತ್ತಮ ಆರೋಗ್ಯ ಸೇವೆ

ಉಡುಪಿಯ ಕಟಪಾಡಿಯಲ್ಲಿ ಲೋಂಬಾರ್ಡ್​ ಮಿಷನ್​ ಆಸ್ಪತ್ರೆಯ ಆರೋಗ್ಯ ಕೇಂದ್ರವನ್ನು ಬಿಷಪ್​ ಹೇಮಚಂದ್ರ ಕುಮಾರ್​ ಉದ್ಘಾಟಿಸಿದರು. ಡಾ.ಸುಶೀಲ್​ ಜತ್ತನ್ನ, ವಿನಯಕುಮಾರ್​ ಸೊರಕೆ, ಫೌಸ್ಟಿನ್​ ಲೂಕಸ್​ ಲೋಬೋ, ಡಾ. ಎ.ರವೀಂದ್ರನಾಥ್​ ಶೆಟ್ಟಿ, ಇಕ್ಬಾಲ್​ ಸಂಶುದ್ದೀನ್​ ಇತರರಿದ್ದರು.
ಉಡುಪಿಯ ಕಟಪಾಡಿಯಲ್ಲಿ ಲೋಂಬಾರ್ಡ್​ ಮಿಷನ್​ ಆಸ್ಪತ್ರೆಯ ಆರೋಗ್ಯ ಕೇಂದ್ರವನ್ನು ಬಿಷಪ್​ ಹೇಮಚಂದ್ರ ಕುಮಾರ್​ ಉದ್ಘಾಟಿಸಿದರು. ಡಾ.ಸುಶೀಲ್​ ಜತ್ತನ್ನ, ವಿನಯಕುಮಾರ್​ ಸೊರಕೆ, ಫೌಸ್ಟಿನ್​ ಲೂಕಸ್​ ಲೋಬೋ, ಡಾ. ಎ.ರವೀಂದ್ರನಾಥ್​ ಶೆಟ್ಟಿ, ಇಕ್ಬಾಲ್​ ಸಂಶುದ್ದೀನ್​ ಇತರರಿದ್ದರು.
Published on

* ಬಿಷಪ್​ ರೆ. ಹೇಮಚಂದ್ರ ಕುಮಾರ್​ ಆಶಯ

* ಲೋಂಬಾರ್ಡ್​ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟನೆ

ಉಡುಪಿ: ಉತ್ತಮವಾದ ಆರೋಗ್ಯ ಸೇವೆ ಇಂದು ನಗರ ಪ್ರೇಶಗಳಲ್ಲಿ ಮಾತ್ರ ಲಭಿಸುತ್ತಿದೆ. ಅಂತಹ ಆರೋಗ್ಯ ಸೇವೆ ಗ್ರಾಮೀಣ ಪ್ರದೇಶದ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರಿಗೂ ಕೂಡ ಪರಿಪೂರ್ಣವಾಗಿ ಲಭಿಸಬೇಕಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಲೋಂಬಾರ್ಡ್​ ಆಸ್ಪತ್ರೆಯ ಆರೋಗ್ಯ ಕೇಂದ್ರ ಒಳ್ಳೆಯ ಸೇವೆ ನೀಡುವಂತಾಗಲಿ ಎಂದು ಸಿಎಸ್​ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ (ಕೆಎಸ್​ಡಿ)ದ ಬಿಷಪ್​ ರೈಟ್​ ರೆ.ಹೇಮಚಂದ್ರ ಕುಮಾರ್​ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಸಿಎಸ್​ಐ ಲೋಂಬಾರ್ಡ್​ ಮೆಮೋ ರಿಯಲ್​(ಮಿಷನ್​) ಆಸ್ಪತ್ರೆಯ ಪೂರ್ಣ ಪ್ರಮಾಣದ ಮೊದಲ ಆರೋಗ್ಯ ಕೇಂದ್ರ (ಪಾಲಿ ಕ್ಲಿನಿಕ್​) ವನ್ನು ಕಟಪಾಡಿಯ ಬಸ್​ ನಿಲ್ದಾಣದ ಬಳಿ ಶನಿವಾರ (ಏ.4) ಉದ್ಘಾಟಿಸಿ ಮಾತನಾಡಿದರು.

ತಜ್ಞ ವೈದ್ಯರಿಂದ ತಪಾಸಣೆ

ಉಡುಪಿಯ ಮಿಷನ್​ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್​ ಜತ್ತನ್ನ ಮಾತನಾಡಿ, ಕಟಪಾಡಿಯ ಈ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಸೇವೆ, ಎಕ್ಸರೇ ಯುನಿಟ್​ ಸೇರಿದಂತೆ ಎಲ್ಲ ಸೌಲಭ್ಯ ಇರಲಿದೆ. ವಾರದಲ್ಲಿ ಆರು ದಿನ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಈ ಕೇಂದ್ರ ತೆರೆದಿರುತ್ತದೆ. ಇಲ್ಲಿ ಕಾಯಂ ವೈದ್ಯರೊಂದಿಗೆ ಮಿಷನ್​ ಆಸ್ಪತ್ರೆಯ ಎಲ್ಲ ವಿಭಾಗಗಳ ತಜ್ಞ ವೈದ್ಯರ ಸೇವೆಯೂ ಲಭ್ಯವಿರಲಿದೆ. ಇದು ಕೇವಲ ಕಟ್ಟಡಗಳ ಕೇಂದ್ರವಲ್ಲ. ನಮ್ಮ ದೃಷ್ಟಿಯ ಸಾರ್ಥಕತೆಯಾಗಿದೆ. ಇದು ಜನರ ಸೇವೆಗಾಗಿಯೇ ಹೊರತು ಕೇವಲ ಲಾಭಕ್ಕಾಗಿ ಅಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಮಂಗಳೂರು ಫಾದರ್​ ಮುಲ್ಲರ್​ ಆಸ್ಪತ್ರೆಯ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವಂ.ಫೌಸ್ಟಿನ್​ ಲೂಕಸ್​ ಲೋಬೋ ಮಾತನಾಡಿದರು.
ಕಟಪಾಡಿಯ ಹಿರಿಯ ವೈದ್ಯ ಡಾ. ಎ.ರವೀಂದ್ರನಾಥ್​ ಶೆಟ್ಟಿ, ಕಟಪಾಡಿ ಗ್ರಾಪಂನ ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಕಟಪಾಡಿಯ ಉದ್ಯಮಿ ಇಕ್ಬಾಲ್​ ಸಂಶುದ್ದೀನ್​, ಕರ್ನಾಟಕ ಕ್ರಿಶ್ಚಿಯನ್​ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್​ ಜತ್ತನ್ನ, ಸಿಎಸ್​ಐ ಕ್ರಿಸ್ಟ್​ ಚರ್ಚ್​ನ ರೆ.ಅಕ್ಷಯ್​ ಅಮ್ಮನ್ನ, ಸಿಎಸ್​ಐ ಕೆಎಸ್​ಡಿ ಅಸೋಸಿಯೇಟ್​ ಸೆಕ್ರಟರಿ ಸ್ಟಿಫನ್​ ಕರ್ಕಡ, ಆಸ್ಪತ್ರೆಯ ಪಿಆರ್​ಒ ರೋಹಿ ರತ್ನಾಕರ್​, ಆಡಳಿತಾಧಿಕಾರಿ ದೀನಾ ಪ್ರಭಾವತಿ, ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಕಾವ್ಯಶ್ರೀ ಶೆಟ್ಟಿ ಉಪಸ್ಥಿತರಿದ್ದರು.
ಸಿಎಸ್​ಐ ಕೆಎಸ್​ಡಿ ರೆ.ಖಜಾಂಚಿ ಐವಾನ್​ ಡಿಸೋನ್ಸ್​  ಹಾಗೂ ಉಡುಪಿ ಏರಿಯಾ ಚೇರ್ಮನ್​ ರೆ.ಕಿಶೋರ್​ ಕುಮಾರ್​ ಪ್ರಾರ್ಥಿಸಿದರು. ಎಲ್​ಎಂಸಿಒಎನ್​ ಪ್ರಾಂಶುಪಾಲೆ ಡಾ.ಸುಜಾ ಕರ್ಕಡ ಸ್ವಾಗತಿಸಿದರು. ಎಲ್​ಎಂಎಸ್​ಒಎನ್​ ಪ್ರಾಂಶುಪಾಲೆ ವೀಣಾ ಮೆನೇಜಸ್​ ವಂದಿಸಿದರು. ನರ್ಸಿಂಗ್​ ಟ್ಯೂಟರ್​ ಹೇಮಲತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net