ವಿವಿಧ ಹಂತದಲ್ಲಿ ಆರ್‌ಆರ್‌ಟಿ ವಿಭಾಗದಲ್ಲಿ 40 ಫೈಲ್, 94ಸಿಯಲ್ಲಿ 531, 53 ಹಾಗೂ 57ರಲ್ಲಿ 2,700 ಕಡತ, ಜನನ ಮರಣದಲ್ಲಿ 27 ಕಡತಗಳು ಬಾಕಿ ಇರುವುದನ್ನು ತಂಡ ಪರಿಶೀಲಿಸಿದೆ. ಅನೇಕ ಕಡತಗಳಿಗೆ ಯಾವುದೇ ಕಾರಣಗಳು ಇಲ್ಲದಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.