ನಗರಸಭೆಯಲ್ಲಿ ಲೋಕಾಯುಕ್ತ ತಪಾಸಣೆ

ಲೋಕಾಯುಕ್ತ ಪೊಲೀಸರು ನಗರಸಭೆಯಲ್ಲಿ ದಾಖಲೆಗಳ ತಪಾಸಣೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಪೊಲೀಸರು ನಗರಸಭೆಯಲ್ಲಿ ದಾಖಲೆಗಳ ತಪಾಸಣೆ ಕೈಗೊಂಡಿದ್ದಾರೆ.
Published on
ಉಡುಪಿ: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನಗರಸಭೆಯಲ್ಲಿ ಗುರುವಾರ ದಾಖಲೆಗಳ ತಪಾಸಣೆ ಕೈಗೊಂಡಿದ್ದಾರೆ.

ನಗರಸಭೆಯಲ್ಲಿ ಕೆಲವು ಕಡತಗಳು ದೀರ್ಘಕಾಲದಿಂದ ವಿಲೇವಾರಿಯಾಗದೇ ಅನಗತ್ಯವಾಗಿ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಸಾರ್ವಜನಿಕರ ಆರೋಪಗಳು ಕೇಳಿಬಂದಿದ್ದವು. ಈ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.

ಕಂದಾಯ, ಪರಿಸರ, ಇಂಜಿನಿಯರಿಂಗ್​, ಆಡಳಿತ ವಿಭಾಗಗಳಲ್ಲಿ ಕಡತಗಳ ನಿರ್ವಹಣೆ ಹಾಗೂ ಸಾರ್ವಜನಿಕ ಅರ್ಜಿಗಳ ವಿಲೇವಾರಿ ಸ್ಥಿತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಕೋಟ್ಯಂತರ ರೂ. ತೆರಿಗೆ ಸಂಗ್ರಹ ಬಾಕಿ, ವಿಲೇವಾರಿಯಾಗದ ನೂರಾರು ಅರ್ಜಿಗಳು ತಪಾಸಣೆ ವೇಳೆ ಕಂಡುಬಂದಿದೆ. ಶುಕ್ರವಾರವೂ ತಪಾಸಣೆ ಮುಂದುವರಿಯಲಿದೆ.

ಲೋಕಾಯುಕ್ತ ಡಿಎಸ್​ಪಿ ಹಾಲಮೂರ್ತಿ, ಸುರೇಶ್​ ಕುಮಾರ್​, ಇನ್ಸ್​ ಪೆಕ್ಟರ್​ ಮಂಜುನಾಥ್​, ರಾಜೇಂದ್ರ ನಾಯಕ್​, ಚಂದ್ರಶೇಖರ್​ ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net