ಈ ಹಿಂದೆ ಇದೇ ಕಾರಣಕ್ಕಾಗಿ ಹಲವು ಅಂಗಡಿಗಳು ಬೀಗ ಮುದ್ರೆಗೆ ಒಳಗಾಗಿದ್ದು, ಬಳಿಕ ಬಹುತೇಕ ಅಂಗಡಿಗಳ ಅನುಭೋಗದಾರರು ಬಾಕಿ ಮೊತ್ತ ಪಾವತಿಸಿ ಬೀಗ ತೆರೆಯಿಸಿಕೊಂಡಿದ್ದರು. ಅವುಗಳ ಪೈಕಿ ಸಮಯಾವಕಾಶ ಬಯಸಿ ಬೀಗ ತೆರೆಯಿಸಿಕೊಂಡಿದ್ದ 5 ಅಂಗಡಿಗಳ ಮಾಲೀಕರು, ನೀಡಲಾದ ಸಮಯಾವಕಾಶದಲ್ಲಿ ಬಾಕಿ ಮೊತ್ತ ಪಾವತಿಸದೆ ಪಂಚಾಯಿತಿ ಆಡಳಿತ ವಂಚಿಸಲು ಮುಂದಾಗಿದ್ದು ಅನಿವಾರ್ಯವಾಗಿ ಅಂಗಡಿ ಕೊಠಡಿಗಳಿಗೆ ಬೀಗ ಜಡಿಯಲಾಗಿದೆ ಎಂದು ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.