ಈ ರಸ್ತೆ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕದ ಸುಮಾರು 2.5 ಕಿಮೀ ದೂರದ ತನಕ ಹೆಚ್ಚು ಹೊಂಡಗಳು ಉಂಟಾಗಿ ಸಂಚಾರ ದುಸ್ತರವಾಗಿತ್ತು. ಹೀಗಾಗಿ ಕೊಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಮುಂದಾಳತ್ವದಲ್ಲಿ ದುರಸ್ತಿಗಾಗಿ ಗೋಳಿತ್ತಡಿ ರಸ್ತೆ ದುರಸ್ತಿ ಶ್ರಮಿಕ ಎಂಬ ವಾಟ್ಸಾೃಪ್ ಗ್ರೂಪ್ ರಚಿಸಿ ಆರ್ಥಿಕ ಸಹಾಯ ನೀಡುವಂತೆ ಕೋರಲಾಗಿತ್ತು. ಹಲವು ದಾನಿಗಳು ಹಣ ಸೇರಿದಂತೆ ಇನ್ನಿತರ ರೂಪದಲ್ಲಿ ಸಹಾಯ ಮಾಡಿದ್ದಾರೆ. ಕಳೆದ ಬುಧವಾರ ಯಂತ್ರದ ಮೂಲಕ ರಸ್ತೆ ಇಕ್ಕೆಲಗಳಲ್ಲಿದ್ದ ಪೊದರು ಮರಗಳ ತೆರವು, ಚರಂಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಭಾನುವಾರದ ತನಕ ಮುಂದುವರಿದಿತ್ತು. ಭಾನುವಾರ ಸ್ಥಳೀಯರು ಶ್ರಮದಾನದ ಮೂಲಕ ಹೊಂಡ ಮುಚ್ಚಿದ್ದಾರೆ. ಬೆಳಗ್ಗೆ ಆರಂಭವಾದ ಶ್ರಮದಾನ ಸಂಜೆಯವರೆಗೂ ಸಾಗಿತ್ತು.