ಯೋಜನೆಯಡಿ ಜೀವನೋಪಾಯ ಸೇವಾ ಕೇಂದ್ರಗಳಿಗೆ ಟ್ರ್ಯಾಕ್ಟರ್, ರೋಟವೇಟರ್, ಕಲ್ಟಿವೇಟರ್, ಹುಲ್ಲು ಕತ್ತರಿಸುವ ಯಂತ್ರ, ಅಡಕೆ-ತೆಂಗು ಮರ ಹತ್ತುವ ಯಂತ್ರ, ಟಾಟಾ ಏಸ್ ವಾಹನ ಖರೀದಿಸಿ ಜಿಪಿಎಲ್ಎಫ್ಗಳಿಗೆ ನೀಡಲಾಗುತ್ತಿದೆ. ಬಳಿಕ ಒಕ್ಕೂಟದವರೇ ಆ ಯಂತ್ರಗಳನ್ನು ಕೃಷಿ ಚಟುವಟಿಕೆಗಳಿಗೆ ತಾಸಿನ ಲೆಕ್ಕದಲ್ಲಿ ನಿಗದಿತ ದರದಲ್ಲಿ ಬಾಡಿಗೆಗೆ ನೀಡುತ್ತಾರೆ. ಇದು ಸಣ್ಣ, ಅತಿಸಣ್ಣ ರೈತರಿಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ನೆರವಾಗಲಿದೆ. ಸಂಜೀವಿನಿ ಮಹಿಳೆಯರೇ ಕೃಷಿಯಲ್ಲಿ ತೊಡಗಿದರೆ ಅವರಿಗೆ ಯಂತ್ರೋಪಕರಣಗಳ ಬಾಡಿಗೆ ದರದಲ್ಲಿ ರಿಯಾಯಿತಿ ಇದೆ.