ದ್ವೇಷ, ಅಸೂಯೆ ತೊರೆದಾಗ ಸಾಮರಸ್ಯದ ಬದುಕು

 ನೆಲ್ಯಾಡಿ ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಂಗಮಂಟಪಕ್ಕೆ ಶಿಲಾನ್ಯಾಸ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ರವಿಚಂದ್ರ ಹೊಸವಕ್ಲು ಮೊದಲಾದವರಿದ್ದರು.
ನೆಲ್ಯಾಡಿ ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಂಗಮಂಟಪಕ್ಕೆ ಶಿಲಾನ್ಯಾಸ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ರವಿಚಂದ್ರ ಹೊಸವಕ್ಲು ಮೊದಲಾದವರಿದ್ದರು.
Published on
ನೆಲ್ಯಾಡಿ: ವಿವಿಧ ಜಾತಿ, ಮತ ಹಾಗೂ ಪಂಥಗಳ ಜನರು ಒಟ್ಟಾಗಿ ಭಕ್ತಿಯಿಂದ ಆರಾಧಿಸುವ ದೇವರು ಶ್ರೀ ಅಯ್ಯಪ್ಪ ಸ್ವಾಮಿ. ದ್ವೇಷ ಮತ್ತು ಅಸೂಯೆಯನ್ನು ಬಿಟ್ಟು ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಶ್ರೀ ದೇವರ ಅನುಗ್ರಹದಿಂದ ಸಭಾಭವನದ ಕೆಲಸ ಆದಷ್ಟು ಬೇಗ ನಡೆಯಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಭಾನುವಾರ ನೆಲ್ಯಾಡಿ ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಶಬರೀಶ ಬಯಲು ರಂಗಮಂಟಪ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀೀಧರ ನೂಜಿನ್ನಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಅಧ್ಯಕ್ಷತೆ ವಹಿಸಿದ್ದರು. ಯುವ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ ಊರುವಾಲಗುತ್ತು, ಮುಂಬೈ ಉದ್ಯಮಿ ಮೋಹನ್ ಗೌಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕ ಪ್ರಕಾಶ್ ಕುಮಾರ್, ಆಡಳಿತ ಸಮಿತಿ ಕಾರ್ಯದರ್ಶಿ ರಾಕೇಶ್ ಎಸ್., ಉಪಾಧ್ಯಕ್ಷ ರಘುನಾಥ್ ಕೆ., ಜತೆ ಕಾರ್ಯದರ್ಶಿ ರಮೇಶ್ ಬಾಣಜಾಲ್ ಉಪಸ್ಥಿತರಿದ್ದರು. ರವಿಚಂದ್ರ ಹೊಸವಕ್ಲು ಸ್ವಾಗತಿಸಿದರು. ದೇವಸ್ಥಾನದ ಕೋಶಾಧಿಕಾರಿ ಸುಧೀರ್ ಕುಮಾರ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net