ಸಾಹಿತ್ಯಕ್ಕಿದೆ ಚೈತನ್ಯ ತುಂಬುವ ಶಕ್ತಿ

ಬರಹಗಾರ ಶ್ರೀಧರ ಬಳಗಾರ ಅವರಿಗೆ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಮುಖರಾದ ಪ್ರೊ.ವಿಕ್ರಮ ವಿಸಾಜಿ, ಕೆ.ಶಾಂತಾರಾಮ್ ಪ್ರಭು, ಡಾ.ಶುಭಕರಾಚಾರಿ ಮತ್ತಿತರರಿದ್ದರು.
ಬರಹಗಾರ ಶ್ರೀಧರ ಬಳಗಾರ ಅವರಿಗೆ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಮುಖರಾದ ಪ್ರೊ.ವಿಕ್ರಮ ವಿಸಾಜಿ, ಕೆ.ಶಾಂತಾರಾಮ್ ಪ್ರಭು, ಡಾ.ಶುಭಕರಾಚಾರಿ ಮತ್ತಿತರರಿದ್ದರು.
Published on

ಕುಂದಾಪುರ: ಜಗತ್ತಿಗೆ ಚೈತನ್ಯ ತುಂಬುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯವು ಸಮುದಾಯದ ಸಂವೇದನೆಯನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಾ ಬಂದಿದೆ ಹಾಗೂ ವ್ಯವಸ್ಥೆಯ ಆಂತರ್ಯವನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಹೇಳಿದರು.

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಗುರುವಾರ ನಡೆದ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ.ಶಾಂತರಾಮ್ ಪ್ರಭು ಅವರು ಬರಹಗಾರ ಶ್ರೀಧರ ಬಳಗಾರ ಅವರಿಗೆ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಕೆ.ದೇವದಾಸ ಕಾಮತ್, ಆಡಳಿತ ಮಂಡಳಿ ಕಾರ್ಯದರ್ಶಿ ಯು.ಎಸ್.ಶೆಣೈ, ಸಮಿತಿ ಸದಸ್ಯರಾದ ಜಾನಕಿ ಬ್ರಹ್ಮಾವರ, ಪ್ರೊ.ವಸಂತ ಬನ್ನಾಡಿ ಉಪಸ್ಥಿತರಿದ್ದರು. ಡಾ.ಸರೋಜಾ ಎಂ. ಸ್ವಾಗತಿಸಿದರು. ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕ ಮಾತನಾಡಿದರು. ಸುಮಲತಾ ಸುರೇಶ್ ಮತ್ತು ಅರ್ಚನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಸತ್ಯನಾರಾಯಣ ವಂದಿಸಿದರು. ಮಂಜುನಾಥ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net