ಸಿಡಿಲು ಬಡಿದು ಮನೆಗೆ ಹಾನಿ

 ಸಿಡಿಲು ಬಡಿದು ಹಾನಿಗೊಂಡ ಬಟ್ಯಪ್ಪ ರೈ ಅವರ ಮನೆ.
ಸಿಡಿಲು ಬಡಿದು ಹಾನಿಗೊಂಡ ಬಟ್ಯಪ್ಪ ರೈ ಅವರ ಮನೆ.
Published on

ಪುತ್ತೂರು ಗ್ರಾಮಾಂತರ: ಬೆಟ್ಟಂಪಾಡಿ ಗ್ರಾಮದ ಕೇಕನಾಜೆಯಲ್ಲಿ ಮಂಗಳವಾರ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿದೆ. ಕೇಕನಾಜೆ ನಿವಾಸಿ ಬಟ್ಯಪ್ಪ ರೈ ಮನೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಕರಟಿ ಹೋಗಿದೆ. ಮನೆ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಛಾವಣಿಗೂ ಹಾನಿಯಾಗಿದೆ.


ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು, ವಿದ್ಯುತ್ ಮೀಟರ್ ಬೋರ್ಡ್ ಕಿತ್ತುಬಂದಿದೆ. ಘಟನೆ ವೇಳೆ ಬಟ್ಯಪ್ಪ ರೈ ಮನೆಯಲ್ಲಿ ಇರಲಿಲ್ಲ. ಘಟನಾ ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ, ಸಿಬ್ಬಂದಿ ಸಂದೀಪ್, ಗ್ರಾಮ ಸಹಾಯಕ ವಿಜಯ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net