ಈ ಭಾಗವು ಪ್ರಮುಖ ಕೃಷಿ ಪ್ರದೇಶವಾಗಿರುವುದರಿಂದ ರೈತರು ಮತ್ತು ಕೂಲಿ ಕಾರ್ಮಿಕರು ಗದ್ದೆ, ತೋಟ, ಅಡಿಕೆ ತೋಟಗಳಲ್ಲಿ ಕೆಲಸ ವಾಡುತ್ತಿರುವ ಸಂದರ್ಭ ಸಿಡಿಲು ಬಡಿಯುವ ಟನೆಗಳು ಸಂಭವಿಸುತ್ತಿವೆ. ಮುಂಗಾರು ಪೂರ್ವದಲ್ಲೇ ತಾಲೂಕಿನಲ್ಲಿ ಸಿಡಿಲಿನ ಆಘಾತದ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ಐದು ವರ್ಷಗಳಲ್ಲಿ 20ಕ್ಕೂ ಅಧಿಕ ಜಾನುವಾರುಗಳು ಸಿಡಿಲಿಗೆ ಬಲಿಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, 200ಕ್ಕೂ ಅಧಿಕ ಮನೆಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ.