

ಬಂಟ್ವಾಳ: ಕಾವಳಪಡೂರು ಗ್ರಾಮದ ಗ್ರಾಮಾಡಳಿತ ಅಧಿಕಾರಿ ಸ್ವಾತಿ ಕೆ. ಅವರನ್ನು ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಕೈಲಾರ್ ನಿವಾಸಿ ಬಶೀರ್ ಎಂಬಾತನ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದಾಯ ದೃಢಪತ್ರಕ್ಕೆ ಸಂಬಂಧಿಸಿ ಅವಧಿ ಮುಗಿದ ಕೂಡಲೇ ಪಡೆದುಕೊಳ್ಳುವಂತೆ ತಿಳಿಸಿದಾಗ ಕೋಪಗೊಂಡ ಬಶೀರ್ ತನ್ನನ್ನು ನಿಂದಿಸಿ ಜೀವಬೆದರಿಕೆ ಒಡ್ಡಿದ್ದಾನೆ ಎಂದು ಸ್ವಾತಿ ಕೆ. ದೂರಿನಲ್ಲಿ ತಿಳಿಸಿದ್ದಾರೆ.