ಪೊಲೀಸ್ ಸಿಬ್ಬಂದಿಗೆ ಜೀವ ಬೆದರಿಕೆ

ಬೇಳುರು ಜೆಡ್ಡುವಿನ ನಿಖಿಲ್
ಬೇಳುರು ಜೆಡ್ಡುವಿನ ನಿಖಿಲ್
Published on
ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹಂದಾಡಿ ಮಟಪಾಡಿ ಗ್ರಾಮದ ಬೀಟ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬೇಳುರು ಜೆಡ್ಡುವಿನ ನಿಖಿಲ್ ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಉಪನಿರೀಕ್ಷಕರ ಸೂಚನೆಯಂತೆ ಹಗಲು ಹೊತ್ತಿನಲ್ಲಿ ಗಸ್ತು ನಿರ್ವಹಿಸುತ್ತಿದ್ದ ಬ್ರಹ್ಮಾವರ ಪೊಲೀಸ್ ಕಾನ್‌ಸ್ಟೆಬಲ್ ಕಿಶನ್ ಅವರು ರೌಡಿ ನಿಖಿಲ್‌ನನ್ನು ಪರಿಶೀಲಿಸಲು ಆತನ ಮನೆಗೆ ಹೋದಾಗ ಆತ ಮನೆಯಲ್ಲಿರದ ಕಾರಣ ಮೊಬೈಲ್ ಕರೆ ಮಾಡಿ ಸಂಪರ್ಕಿಸಿದ್ದರು.
ಈ ಸಂದರ್ಭ ‘ನನ್ನ ಮನೆಗೆ ಯಾಕೆ ಬಂದಿದ್ದಿಯಾ? ಅಲ್ಲೆ ಇರು ನೀನು. ನಾನು ಬಂದು ನಿನ್ನನ್ನು ಕೊಲೆ ಮಾಡುತ್ತೇನೆ’ ಎಂದು ಜೀವ ಬೆದರಿಕೆ ಹಾಕಿರುವುದಲ್ಲದೆ ಮತ್ತೆ ರಾತ್ರಿ ವಿಶ್ರಾಂತಿಯ ಸಮಯದಲ್ಲಿ ಆರೋಪಿ ಕಿಶನ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ.
ಜೀವ ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪದಡಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net