ಡಿ.16,17ಕ್ಕೆ ಜೀವವಿಮಾ ನೌಕರರ ಸಂಘದ ಸಮ್ಮೇಳನ

ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ಸುದ್ದಿಗೋಷ್ಠಿ.
ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ಸುದ್ದಿಗೋಷ್ಠಿ.
Published on
ಉಡುಪಿ: ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ( ಆಲ್​ ಇಂಡಿಯಾ ಲೈಫ್​ ) 27ನೇ ರಾಷ್ಟ್ರ ಮಟ್ಟದ ದ್ವೈ ವಾರ್ಷಿಕ ಸಮ್ಮೇಳನ ಡಿ. 16 ಮತ್ತು 17 ರಂದು ಕರಾವಳಿ ಜಂಕ್ಷನ್​ ಬಳಿಯ ರಂಜಿತಾ ಪ್ಯಾಲೆಸ್​ (ಮಣಿಪಾಲ ಇನ್​ )ನಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾ ಉದಯ್​ಶಂಕರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ. 15 ರಂದು ಸಾಯಂಕಾಲ 5.30ಕ್ಕೆ ಭಾರತೀಯ ಮಜ್ದೂರ್​ ಸಂಘ ( ಬಿಎಂಎಸ್​) ವಿಮಾ ವಲಯದ ಉಸ್ತುವಾರಿ ಸೋಮೇಶ್​ ಬಿಸ್ವಾಸ್​ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಆಲ್​ ಇಂಡಿಯಾ ಲೈಫ್​ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ರಾಕೇಶ್​ ಲಾಕ್ತವಾಲ ಮತ್ತು ಕಾರ್ಯಾಧ್ಯಕ್ಷ ಪ್ರಮೋದ್​ ರಾಣಾ ಕೂಡ ಉಪಸ್ಥಿತರಿವರು ಎಂದರು.

ಸಮ್ಮೇಳನದಲ್ಲಿ ಎಲ್​ ಐ ಸಿ ನೌಕರರ ಮತ್ತು ಎಲ್​ಐಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಎರಡು ದಿನಗಳಲ್ಲಿ ಜರುಗುವ ಸಮ್ಮೇಳನಕ್ಕೆ ಭಾರತಾದ್ಯಂತ ಎಲ್​ಐಸಿಯ 150ಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ 6 ವರ್ಷಗಳಿಂದ ದರ್ಜೆ 3 ಸಿಬ್ಬಂದಿ ನೇಮಕಾತಿ ಆಗಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್​ ಸೇವೆಗಳ ಮೂಲಕ ಪಾಲಿಸಿದಾರರಿಗೆ ನೇರವಾಗಿ ಸೇವೆ ಸಲ್ಲಿಸಲು ಅಗತ್ಯವಾಗಿರುವ ದರ್ಜೆ 3 ವೃಂದಕ್ಕೆ ಯುವ ಪೀಳಿಗೆಯನ್ನು ನೇಮಿಸಿಕೊಳ್ಳುವ ಅವಶ್ಯಕತೆ ಇದೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಸಿದಾರರನ್ನು ಆಕರ್ಷಿಸಲು 3 ವರ್ಷಗಳ ಲಾಕ್​- ಇನ್​ ಅವಧಿಯನ್ನು ಹೊಂದಿರುವ ಅಲ್ಪಾವಧಿಯ ಪಾಲಿಸಿಗಳನ್ನು ಬಿಡುಗಡೆ ಮಾಡಲು ಸಮ್ಮೇಳನದಲ್ಲಿ ರ್ನಿಣಯಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸಂಟನೆ ಕೋಶಾಧಿಕಾರಿ ಬಾಲಕೃಷ್ಣ ಶೆಣೈ, ಪ್ರಧಾನ ಕಾರ್ಯದರ್ಶಿ ಮನೋಹರ್​ ವೇಗಸ್​, ಜಿಲ್ಲಾಧ್ಯಕ್ಷ ಲಕ್ಷ್ಮಣ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net