ಕಾರ್ಯವೈಖರಿ ಬದಲಿಸದಿದ್ದರೆ ಸಿಎಂಗೆ ಪತ್ರ

 ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ವಾತನಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸರಿತಾ ಶಿವಾನಂದ, ಕಿರಣ್ ಆಳ್ವ ಇದ್ದರು.
ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ವಾತನಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸರಿತಾ ಶಿವಾನಂದ, ಕಿರಣ್ ಆಳ್ವ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಭ್ರಷ್ಟಾಚಾರ ಸಹಿತ ಕರ್ತವ್ಯದಲ್ಲಿ ನಾಗರಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಕೆಲ ದಿನಗಳ ಹಿಂದೆ ಲೋಕಾಯುಕ್ತ ದಾಳಿ ನಡೆದು ಸದಸ್ಯರ ಸಹಿತ ಶಾಸಕನಾಗಿ ನಮಗೆ ಮುಜುಗರ ಉಂಟು ಮಾಡಿದೆ. ಪುರಸಭೆ ಸಿಬ್ಬಂದಿ ಕಾರ್ಯವೈಖರಿ ಬದಲಾಯಿಸದಿದ್ದರೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ಹಿಂಜರಿಯುವುದಿಲ್ಲ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಎಚ್ಚರಿಕೆ ನೀಡಿದರು.
ಕಾಪು ಇಂದಿರಾಗಾಂಧಿ ಸಭಾಂಗಣದಲ್ಲಿ ಶನಿವಾರ ನಡೆದ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಅರ್ಜಿ ಸಲ್ಲಿಕೆಗೆ ಬರುವ ನಾಗರಿಕರಿಗೆ ಅಗತ್ಯ ದಾಖಲೆಗಳ ಮಾಹಿತಿ ನೀಡಬೇಕು. ಪ್ರತಿಯೊಬ್ಬ ಅಧಿಕಾರಿಯ ಕಚೇರಿಯಲ್ಲಿ ದಾಖಲೆಗಳ ಪೂರ್ಣ ವಿವರಗಳಿರಬೇಕು. ಈ ಬಗ್ಗೆ ತಾನೇ ಖುದ್ದಾಗಿ ಪರಿಶೀಲನೆಗೆ ಆಗಮಿಸುತ್ತೇನೆ ಎಂದರು.

ರ್ಮಾ

ಕಾಪು ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ, ಫುಟ್‌ಪಾತ್ ಅತಿಕ್ರಮಣ, ಕೊಳಚೆ ನೀರಿನ ಸಮಸ್ಯೆ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಆದರೆ ಅದಕ್ಕೆ ಪರಿಹಾರ ಸಿಗುತ್ತಿಲ್ಲ ಎಂದು ಸದಸ್ಯ ಶೈಲೇಶ್ ಅಮೀನ್ ಅಳಲು ತೋಡಿಕೊಂಡರು. ವಿವಿಧ ಸಮಸ್ಯೆಗಳ ಬಗ್ಗೆ ಅನಿಲ್ ಕುಮಾರ್, ಫರ್ಜಾನಾ, ಅಮೀರ್ ಕಾಪು, ಸುರೇಶ್ ದೇವಾಡಿಗ ಗಮನ ಸೆಳೆದರು.
ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ, ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಉಪಸ್ಥಿತರಿದ್ದರು.

ಸಾಮೂಹಿಕ ವರ್ಗಾವಣೆ ಎಚ್ಚರಿಕೆ

ಕರ್ತವ್ಯಕ್ಕೆ ಹಾಜರಾದ ಕೂಡಲೆ ಸಿಬ್ಬಂದಿ ಸಭೆ ನಡೆಸಿ ತಿಳಿವಳಿಕೆ ನೀಡುವ ಕೆಲಸ ಮಾಡಲಾಗಿದೆ. ಎಲ್ಲ ಸಿಬ್ಬಂದಿ ಹುದ್ದೆಯಲ್ಲಿ ಅದಲು ಬದಲು ಮಾಡಲು ಸಾಧ್ಯವಿಲ್ಲ. ಕರ್ತವ್ಯದಲ್ಲಿ ಲೋಪ ಆಗಿರುವೆಡೆ ಬೇರೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಎಲ್ಲ ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಎಚ್ಚರಿಕೆ ನೀಡಿದರು.

ಒಂದು ಮರ ಕಡಿದರೆ 10 ಗಿಡ ನೆಡಿ

ಬೊಮ್ಮುಕೆರೆ ಸುತ್ತ ಬೆಳೆದಿರುವ ಗಿಡಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವಂತೆ ಮುಖ್ಯಾಧಿಕಾರಿ ಅರಣ್ಯ ಅಧಿಕಾರಿಯನ್ನು ಒತ್ತಾಯಿಸಿದರು. ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠದಲ್ಲಿರುವ ಪ್ರಕರಣದನ್ವಯ ಅಭಿವೃದ್ಧಿಗೆ ಒಂದು ಗಿಡ ತೆರವು ವಾಡಿದರೆ 10 ಗಿಡಗಳನ್ನು ನೆಡಬೇಕಾಗಿದೆ. ಪುರಸಭೆಯ ವಿಶೇಷ ಪ್ರಕರಣವೆಂದು ಪರಿಗಣಿಸಿ ಮರಗಳ ತೆರವಿಗೆ ಅನುಮತಿ ಕೋರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಹೆದ್ದಾರಿ ಇಲಾಖೆ ವಿರುದ್ಧ 4 ಪ್ರಕರಣ

ರ್ಮಾ

ರ್ಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net