ಆಸ್ಪತ್ರೆ ಹೋರಾಟ ಸಮಿತಿ ಸಭೆಯಲ್ಲಿ ಶಿವರಾಮ ರೈ ಮಾತನಾಡಿದರು. ಪ್ರಮುಖರಾದ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗೌಡ ಅತ್ಯಾಡಿ, ಗೋಪಾಲ ಮೊದಲಾದವರು ಉಪಸ್ಥಿತರಿದ್ದರು.
Published on:
Copied
Follow Us
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯೂ ನುರಿತ ವೈದ್ಯರು ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಕುಮಾರಧಾರಾ ಸಭಾಂಗಣದಲ್ಲಿ ಆಸ್ಪತ್ರೆ ಹೋರಾಟ ಸಮಿತಿ ಸಭೆ ನಡೆಯಿತು.
ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲು ಸೆ.2ರಂದು 1000 ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ರವಾನಿಸುವ ಮೂಲಕ ಪತ್ರ ಚಳವಳಿ ನಡೆಸಲು ತೀರ್ಮಾನ ಮಾಡಲಾಯಿತು. ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತುರ್ತು ಸಂದರ್ಭ ನುರಿತ ವೈದ್ಯರ ಸೇವೆ ಸಿಗದಿರುವ ಬಗ್ಗೆ ಪತ್ರದ ಮೂಲಕ ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಿರ್ಧರಿಸಲಾಯಿತು.
ಆಸ್ಪತ್ರೆ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ, ಪತ್ರ ಚಳವಳಿ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಪ್ರಮುಖರಾದ ಶಿವರಾಮ ರೈ, ಗೋಪಾಲ್, ವೆಂಕಟೇಶ್ ಎಚ್.ಎಲ್., ವಿಮಲಾ ರಂಗಯ್ಯ, ಅಚ್ಯುತ ಗೌಡ, ಪವನ್ ಎಂ.ಡಿ., ಮಾಧವ, ಈಶ್ವರ, ಗಿರಿಧರ ಸ್ಕಂದ, ರವೀಂದ್ರ, ಮೋಹನದಾಸ ರೈ, ಉಮೇಶ್, ಗುಣವರ್ಧನ ಕೆದಿಲ, ಗಿರೀಶ್ ಆಚಾರ್ಯ, ಸುಜಾತಾ, ಚಂದ್ರಶೇಖರ ನಾಯರ್ ಇದ್ದರು.