ಹೊಸತನದಿಂದ ಮರೆಯಬಾರದು ನಮ್ಮತನ

ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ಭಾನುವಾರ ಕೆಸರುಗದ್ದೆ ಕ್ರೀಡಾಕೂಟ ಗಮ್ಮತ್ತ್ ಕಾರ್ಯಕ್ರಮವನ್ನು ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಪ್ರಮುಖರಾದ ಕೆ.ಜಯಪ್ರಕಾಶ ಶೆಟ್ಟಿ, ಶರತ್ ಕುವಾರ್ ಶೆಟ್ಟಿ, ಕಿರಣ್ ಕುವಾರ್ ಕೊಡ್ಗಿ ಮೊದಲಾದವರಿದ್ದರು.
ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ಭಾನುವಾರ ಕೆಸರುಗದ್ದೆ ಕ್ರೀಡಾಕೂಟ ಗಮ್ಮತ್ತ್ ಕಾರ್ಯಕ್ರಮವನ್ನು ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಪ್ರಮುಖರಾದ ಕೆ.ಜಯಪ್ರಕಾಶ ಶೆಟ್ಟಿ, ಶರತ್ ಕುವಾರ್ ಶೆಟ್ಟಿ, ಕಿರಣ್ ಕುವಾರ್ ಕೊಡ್ಗಿ ಮೊದಲಾದವರಿದ್ದರು.
Published on

 ವಿಜಯವಾಣಿ ಸುದ್ದಿಜಾಲ ಬೈಂದೂರು

 ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯು ಭಾಷೆ ಮೂಲಕ ವ್ಯಕ್ತವಾಗುತ್ತದೆ. ನಮ್ಮ ಹಿರಿಯರು ಬಳಸುತ್ತಿದ್ದ ಭಾಷೆ ಬಗ್ಗೆ ಹೆಮ್ಮೆ ಹೊಂದಿರುವ ಜತೆಗೆ ಅದನ್ನು ಹೆಚ್ಚು ಬಳಸುವ ಬಗ್ಗೆ ಗಮನಹರಿಸಬೇಕಿದೆ. ಹೊಸತನಕ್ಕೆ ಹೊಂದಿಕೊಳ್ಳುವುದು ತಪ್ಪಲ್ಲ, ಆದರೆ ನಮ್ಮತನವನ್ನು ಮರೆಯಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

 ಬೈಂದೂರು ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ಭಾನುವಾರ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟ ಗಮ್ಮತ್ತ್ ಉದ್ಘಾಟಿಸಿ ವಾತನಾಡಿದರು.
 ಕುಂದ ಅಧ್ಯಯನ ಪೀಠದ ಸದಸ್ಯ ಕೆ.ಜಯಪ್ರಕಾಶ ಶೆಟ್ಟಿ ವಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ಶರತ್ ಕುವಾರ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್ ಕುವಾರ್ ಕೊಡ್ಗಿ, ವಾಜಿ ಶಾಸಕ ಬಿ.ಎಂ.ಸುಕುವಾರ ಶೆಟ್ಟಿ, ಬೆಂಗಳೂರು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬಾರ್ಕೂರು ದೀಪಕ್ ಶೆಟ್ಟಿ, ಹಿರಿಯ ಸಹಕಾರಿ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಚಲನಚಿತ್ರ ನಟರಾದ ಶೈನ್ ಶೆಟ್ಟಿ, ತನ್ವೀರಾಮ್, ರೈತ ಸಂಘ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುವಾರ್ ಶೆಟ್ಟಿ, ಪ್ರಮುಖರಾದ ರವಿ ಶೆಟ್ಟಿ ಬೈಂದೂರು, ಡಾ.ರಮೇಶ ಶೆಟ್ಟಿ, ಭರತ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಡಾ.ಗೋವಿಂದ ಬಾಬು ಪೂಜಾರಿ, ಯು.ರಾಜೇಶ್ ಕಾರಂತ್, ಕೃಷ್ಣಯ್ಯ ಮದ್ದೋಡಿ, ಪ್ರಭಾಕರ ಶೆಟ್ಟಿ, ಗೋಕುಲ್ ಶೆಟ್ಟಿ, ಜನಾರ್ದನ ದೇವಾಡಿಗ ಉಪ್ಪುಂದ, ಕೆ.ಸಿ.ರಾಜೇಶ್, ಮಂಜು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಜಿ.ಉಪ್ಪುಂದ ನಿರೂಪಿಸಿದರು. ಸುನೀಲ್ ಬೈಂದೂರು ವಂದಿಸಿದರು.

ಮೆರವಣಿಗೆ, ವಿವಿಧ ಸ್ಪರ್ಧೆ

 ಬೆಳಗ್ಗೆ ರಾಹುತನಕಟ್ಟೆಯಿಂದ ಜೆಎನ್‌ಆರ್ ಹಾಲ್ ತನಕ ವಿವಿಧ ಭಜನಾ ತಂಡಗಳು, ಎತ್ತಿನಗಾಡಿ, ಯಕ್ಷಗಾನ ವೇಷಗಳು, ಚೆಂಡೆ ತಂಡಗಳಿಂದ ವೈಭವದ ಮೆರವಣಿಗೆ, ಬಳಿಕ ಕಂಬಳಗದ್ದೆಯಲ್ಲಿ 35 ಜೊತೆ ಕೋಣಗಳ ಕಂಬಳ ನಡೆಯಿತು. ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಗ್ರಾಮೀಣ ಸೊಗಡಿನ ವಿವಿಧ ಸ್ಪರ್ಧೆಗಳು ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net