ಎಲ್ಲ ಧರ್ಮಗಳನ್ನೂ ಅರಿತು ಬಾಳೋಣ

ಉಡುಪಿಯ ಕ್ರೈಸ್ತ ಧರ್ಮಪ್ರಾಂತ್ಯ ಆಯೋಜಿಸಿದ್ದ ಕ್ರಿಸ್ಮಸ್​ ಸ್ನೇಹ ಕೂಟವನ್ನು ಡಾ.ಜೆರಾಲ್ಡ್​ ಐಸಾಕ್​ ಲೋಬೊ ಉದ್ಘಾಟಿಸಿದರು. ಹರಿರಾಂ ಶಂಕರ್​, ಅನಿಲ್​ ಲೋಬೊ, ಸು.ಜಿ. ಕುರ್ಯ, ಡೆನಿಸ್​ ಡೆಸಾ, ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​, ಸ್ಟೀವನ್​ ಡಿಸೋಜಾ, ಮೈಕಲ್​ ರೊಡ್ರಿಗಸ್​ ಇದ್ದರು.
ಉಡುಪಿಯ ಕ್ರೈಸ್ತ ಧರ್ಮಪ್ರಾಂತ್ಯ ಆಯೋಜಿಸಿದ್ದ ಕ್ರಿಸ್ಮಸ್​ ಸ್ನೇಹ ಕೂಟವನ್ನು ಡಾ.ಜೆರಾಲ್ಡ್​ ಐಸಾಕ್​ ಲೋಬೊ ಉದ್ಘಾಟಿಸಿದರು. ಹರಿರಾಂ ಶಂಕರ್​, ಅನಿಲ್​ ಲೋಬೊ, ಸು.ಜಿ. ಕುರ್ಯ, ಡೆನಿಸ್​ ಡೆಸಾ, ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​, ಸ್ಟೀವನ್​ ಡಿಸೋಜಾ, ಮೈಕಲ್​ ರೊಡ್ರಿಗಸ್​ ಇದ್ದರು.
Published on

* ಎಸ್ಪಿ ಹರಿರಾಂ ಶಂಕರ್​ ಆಶಯ

* ಕ್ರಿಸ್ಮಸ್​ ಸ್ನೇಹ ಕೂಟ ಉದ್ಘಾಟನೆ

ಉಡುಪಿ: ಸಮಾಜದ ಏಕತೆ ಗಟ್ಟಿಗೊಳಿಸುವುದು ವಿಶ್ವದ ಎಲ್ಲ ಧರ್ಮಗಳ ಮೂಲ ಉದ್ದೇಶವಾಗಿದೆ. ಧರ್ಮವು ಜನರನ್ನು ಸಾಮಾಜಿಕ, ಆಧ್ಯಾತ್ಮಿಕವಾಗಿ ಪ್ರಭಾವಿತಗೊಳಿಸುತ್ತದಲ್ಲದೆ, ಒಗ್ಗಟ್ಟಿನ ಭಾವನೆ ಮೂಡಿಸುತ್ತದೆ. ಎಲ್ಲ ಧರ್ಮಗಳ ಆಚರಣೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿತು ಬಾಳುವ ಮೂಲಕ ಬಲಿಷ್ಠ ಭಾರತ ಕಟ್ಟೋಣ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮದವರಿಗಾಗಿ ಆಯೋಜಿಸಿದ್ದ ಕ್ರಿಸ್ಮಸ್​ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರಿಸ್ಮಸ್​ ಹಬ್ಬವು ಎಲ್ಲ ಸಮುದಾಯದವರೂ ಜತೆಯಾಗಿ ಆಚರಿಸುವ ಕಾರ್ಯಕ್ರಮವಾಗಿದೆ ಎಂದರು.

ಶಾಂತಿಯಿಂದ ಬದುಕೋಣ

ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್​ ಐಸಾಕ್​ ಲೋಬೊ ಮಾತನಾಡಿ, ಪ್ರಭು ಯೇಸು ತಮ್ಮ ಸ್ವರ್ಗದ ಸಾಮ್ರಾಜ್ಯ ಬಿಟ್ಟು ಗೋದಲಿಯಲ್ಲಿ ಜನಿಸಿದರು. ಮಾನವ ದೇವರಿಂದ ದೂರ ಸರಿದಾಗ, ಪಾಪಕೂಪದಿಂದ ತೊಳಲಾಡಿದಾಗ ಅವರು ಆಗಮಿಸಿ ಮತ್ತೆ ಮಾನವರನ್ನು ದೇವರನ್ನಾಗಿಸಲು ಪ್ರಯತ್ನಿಸಿದರು. ಭೂಲೋಕದಲ್ಲಿ ಶಾಂತಿಗಾಗಿ ಶ್ರಮಿಸಿದವರು ಭಾಗ್ಯವಂತರು ಎಂದು ಯೇಸು ಸ್ವಾಮಿ ಸಾರಿದ್ದಾರೆ. ಅವರ ಸಂದೇಶದಂತೆ ಬದುಕಿ ಬಾಳೋಣ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಧರ್ಮಪ್ರಾಂತ್ಯದ ವತಿಯಿಂದ ಗೌರವಿಸಲಾಯಿತು. ಎಂಸಿಸಿ ಬ್ಯಾಂಕ್​ನ ಅಧ್ಯಕ್ಷ ಅನಿಲ್​ ಲೋಬೊ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸು.ಜಿ. ಕುರ್ಯ ಶುಭ ಹಾರೈಸಿದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​, ಕುಲಪತಿ ವಂ.ಸ್ಟೀವನ್​ ಡಿಸೋಜಾ ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್​ ಡೆಸಾ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಮೈಕಲ್​ ರೊಡ್ರಿಗಸ್​ ವಂದಿಸಿದರು. ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net