ಮಕ್ಕಳಲ್ಲಿ ದುಡಿಮೆಯ ಸಂಸ್ಕೃತಿ ಬೆಳೆಸೋಣ

 ರೋಸಾ ಮಿಸ್ತಿಕಾ ಪ್ರೌಢಶಾಲೆ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಸಂಚಾಲಕಿ ರೋಸ್ ಲಿಟಾ, ನವೀನ್ ಸಪಲಿಗ, ಲೀನಾ ಪಿರೇರ, ಶೀಲಾವತಿ, ಮರಿಸ್ಸಾ ಲೂಸಿ ಮತ್ತಿತರರು ಉಪಸ್ಥಿತರಿದ್ದರು.
ರೋಸಾ ಮಿಸ್ತಿಕಾ ಪ್ರೌಢಶಾಲೆ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಸಂಚಾಲಕಿ ರೋಸ್ ಲಿಟಾ, ನವೀನ್ ಸಪಲಿಗ, ಲೀನಾ ಪಿರೇರ, ಶೀಲಾವತಿ, ಮರಿಸ್ಸಾ ಲೂಸಿ ಮತ್ತಿತರರು ಉಪಸ್ಥಿತರಿದ್ದರು.
Published on
ಗುರುಪುರ: ಮಕ್ಕಳಿಗೆ ಕೆಲಸ ಮಾಡಲು ಆದೇಶಿಸುವ ಬದಲಾಗಿ ಸ್ವತಃ ತಾವೇ ಮಾಡಿ ಮಕ್ಕಳಿಗೆ ಆದರ್ಶಪ್ರಾಯರಾಗಬೇಕು. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ಮಕ್ಕಳಲ್ಲಿ ದುಡಿಮೆಯ ಸಂಸ್ಕೃತಿ ಬೆಳೆಸೋಣ. ಕುಟುಂಬದಲ್ಲಿ ಹೊಂದಾಣಿಕೆಯ ಬದುಕು ಕಲಿಸೋಣ ಎಂದು ಲೀಝಾ ಕೆ.ರೋಡ್ರಿಗಸ್ ಹೇಳಿದರು.
ಕೈಕಂಬ-ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ಸಂಚಾಲಕಿ ರೋಸ್ ಲಿಟಾ ಅಧ್ಯಕ್ಷತೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಮಹಾಸಭೆ ನಡೆಯಿತು.
ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಮಿತ್‌ರಾಜ್ ಎಚ್‌ಪಿವಿ ಲಸಿಕೆ ಬಗ್ಗೆ ಮಾಹಿತಿ ನೀಡಿದರು.ಜತೆ ಕಾರ್ಯದರ್ಶಿ ಅಶ್ರಿತಾ ಗೊನ್ಸಾಲ್ವಿಸ್ ವಾರ್ಷಿಕ ವರದಿ ವಾಚಿಸಿದರು. ಸಿಲ್ವಿಯಾ ಮರಿಯ ಮಿನೆಜಸ್ ಲೆಕ್ಕಪತ್ರ ಮಂಡಿಸಿದರು.
ಶಿಕ್ಷಕ- ರಕ್ಷಕ ಸಂಘ ಉಪಾಧ್ಯಕ್ಷರಾಗಿ ನವೀನ್ ಸಪಲಿಗ ಆಯ್ಕೆಯಾದರು. ಕಾನ್ವೆಂಟ್ ಸುಪೀರಿಯರ್ ಲೀನಾ ಪಿರೇರಾ, ಬದ್ರಿಯಾ ನಗರ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಶೀಲಾವತಿ, ಸಂಘದ ಮಾಜಿ ಉಪಾಧ್ಯಕ್ಷೆ ಗೀತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮರಿಸ್ಸಾ ಲೂಸಿ ಸ್ವಾಗತಿಸಿದರು. ಶಿಕ್ಷಕಿ ಐಡಾ ಪಿರೇರ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಶಿಕ್ಷಕಿ ಸಬೀನಾ ಕ್ರಾಸ್ತ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net