

ಕಾರ್ಯಾಗಾರದ ಮೂಲಕ ಕಾವಿ ಕಲೆಯ ವಿನ್ಯಾಸಗಳನ್ನು ದಿನಬಳಕೆಯ ವಸ್ತುಗಳಲ್ಲೂ ಪ್ರಯೋಗಾತ್ಮಕವಾಗಿ ಚಿತ್ರಿಸಲಾಗಿದೆ. ಈ ಪ್ರಯತ್ನ ಕಲೆಯ ಬೆಳವಣಿಗೆಗೆ ಪೂರಕವಾಗಿದ್ದು, ಸ್ಥಳೀಯರು ಇನ್ನಷ್ಟು ತೊಡಗಿಸಿಕೊಳ್ಳಬೇಕು. ಉಡುಪಿ ಭಾಗಕ್ಕೆ ಕಾವಿ ಕಲೆಗೆ ಜಿಐ ಟ್ಯಾಗ್ ನೀಡವಂತೆ ಈಗಾಗಲೇ ಅರ್ಜಿ ಹಾಕಲಾಗಿದ್ದು, ಗೋವಾ ಹಾಗೂ ನಮ್ಮ ಕರಾವಳಿಯ ಭಾಗಕ್ಕೆ ಜಂಟಿಯಾಗಿ ಲಭಿಸುವ ನಿರೀಕ್ಷೆ ಇದೆ.