ಅಧಃಪತನಗೊಳ್ಳಲಿ ಅಸ್ಪಶ್ಯತೆ

 ಹಿಂದೂ ಸಮಾಜೋತ್ಸವದದಲ್ಲಿ ವಿಹಿಂಪ ದಕ್ಷಿಣ ಕರ್ನಾಟಕ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿದರು. ಗಣೇಶ್ ತಂತ್ರಿ ದೇಲಂಪಾಡಿ, ಸಂತೋಷ ಕುಮಾರ್ ಗಾಡಿಗುಡ್ಡೆ, ಭಜರಂಗ್ ಲಾಲ್ ಬಾಗಡೆಜಿ ಮತ್ತಿತರರಿದ್ದರು.
ಹಿಂದೂ ಸಮಾಜೋತ್ಸವದದಲ್ಲಿ ವಿಹಿಂಪ ದಕ್ಷಿಣ ಕರ್ನಾಟಕ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿದರು. ಗಣೇಶ್ ತಂತ್ರಿ ದೇಲಂಪಾಡಿ, ಸಂತೋಷ ಕುಮಾರ್ ಗಾಡಿಗುಡ್ಡೆ, ಭಜರಂಗ್ ಲಾಲ್ ಬಾಗಡೆಜಿ ಮತ್ತಿತರರಿದ್ದರು.
Published on
ಬದಿಯಡ್ಕ: ಸನಾತನ ಹಿಂದೂ ಧರ್ಮೀಯರು ಸಮಗ್ರವಾಗಿ ಒಗ್ಗೂಡುವ ಜತೆಗೆ ನಮ್ಮೊಳಗಿರುವ ಅಸ್ಪಶ್ಯತಾಭಾವನ್ನು ಹೋಗಲಾಡಿಸಬೇಕು. ಕುಂಬ್ಡಾಜೆಯ ಹಿಂದೂ ಸಮಾಜೋತ್ಸವದಿಂದ ಅಸ್ಪಶ್ಯತೆ ಅಧಃಪತನಗೊಳ್ಳುವಂತಾಗಲಿ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.
ಕುಂಬ್ಡಾಜೆ ಪಂಚಾಯತಿ ಹಿಂದೂ ಸಮಾಜೋತ್ಸವ ಸಮಿತಿ ಜಯ ನಗರ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಕೂಚಿ ಭಾಷಣ ಮಾಡಿದರು.
ಗಣೇಶ್ ತಂತ್ರಿ ದೇಲಂಪಾಡಿ ಉದ್ಘಾಟಿಸಿದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕುಮಾರ್ ಗಾಡಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಜರಂಗ್ ಲಾಲ್ ಬಾಗಡೆಜಿ, ಬಜರಂಗದಳ ಕ್ಷೇತ್ರೀಯ ಸಂಯೋಜಕ ಜಿಜೇಶ್ ಪಟೇರಿ, ಹಿಂದೂ ಸಮಾಜೋತ್ಸವ ಸಮಿತಿ ರಕ್ಷಾಧಿಕಾರಿ ಹರಿನಾರಾಯಣ, ಗೌರವಾಧ್ಯಕ್ಷ ರಾಮಚಂದ್ರ ಮಾರ್ಪನಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಲಾವಣ್ಯಗಿರೀಶ್ ಉಪಸ್ಥಿತರಿದ್ದರು.
ವಿದ್ಯಾಲಕ್ಷ್ಮೀ ಮೈಲ್ತೊಟ್ಟಿ ಪ್ರಾರ್ಥಿಸಿದರು. ಸಮಿತಿ ಸಂಚಾಲಕ ಹರಿಪ್ರಸಾದ್ ಪುತ್ರಕಳ ಸ್ವಾಗತಿಸಿ, ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ, ರೋಶಿಣಿ ಜನಾರ್ದನ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net