ಕುಂದಾಪುರ: ಇಂದಿನ ಬಹುತೇಕ ಮಕ್ಕಳಲ್ಲಿ ಕೀಳರಿಮೆ ಜಾಸ್ತಿಯಿದೆ. ಯುವ ಸಮೂಹವು ಇಂಜಿನಿಯರ್, ವೈದ್ಯ, ಸಿಎ ಆಗುವ ಜತೆಗೆ ಉದ್ಯಮದ ಕಡೆಗೂ ಗಮನಹರಿಸಿದರೆ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ. ಉದ್ಯಮಿಯೊಬ್ಬ 10 ಮಂದಿಗೆ ಉದ್ಯೋಗ ನೀಡಲು ಸಾಧ್ಯ ಎಂದು ಉದ್ಯಮಿ ಮುನಿಯಾಲು ಉದಯ ಕುವಾರ್ ಶೆಟ್ಟಿ ಹೇಳಿದರು.
ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ವ್ಯವಹಾರ ಮೇಳವನ್ನು ಶನಿವಾರ ಉದ್ಘಾಟಿಸಿ ವಾತನಾಡಿದರು.
ಶ್ರೀ ವೆಂಕಟರಮಣ ದೇವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ವಿಶೇಷ ಸಾಧಕರಾದ ಮುರಳಿ ಕಡೆಕಾರ್, ಮಹಾಬಲ ದೇವಾಡಿಗ ಕಮಲಶಿಲೆ, ವಿಶ್ವೇಶ್ವರ ಅಡಿಗ, ಗಣಪತಿ ಖಾರ್ವಿ, ಗೌತಮ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ, ಖಜಾಂಚಿ ಕೆ.ಲಕ್ಷ್ಮೀನಾರಾಯಣ ಶೆಣೈ, ಪ್ರೌಢಶಾಲಾ ಮುಖ್ಯಶಿಕ್ಷಕ ಕೃಷ್ಣ ಅಡಿಗ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರೇಷ್ಮಾ ಡಿಸೋಜ, ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಪ್ರಮೀಳಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್ ಗಾಣಿಗ ಸ್ವಾಗತಿಸಿದರು. ನಾಗೇಶ್ ಸನ್ಮಾನಿತರನ್ನು ಪರಿಚಯಿಸಿದರು. ಶಿವರಾಜ್ ಹಾಗೂ ಅಮೃತಾ ನಿರೂಪಿಸಿದರು. ಸುಜಯ್ ಕೋಟೆಗಾರ್ ವಂದಿಸಿದರು.