ಪೆನ್ಶನ್ ಯೋಜನೆ ಪರಿಷ್ಕರಣೆಯಾಗಲಿ

 ಪಿಎಫ್ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ.ಕುಞಂಬಾಡಿ, ಪಿ.ಕಾರ್ಯಂಬು ಮೊದಲಾದವರಿದ್ದರು.
ಪಿಎಫ್ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ.ಕುಞಂಬಾಡಿ, ಪಿ.ಕಾರ್ಯಂಬು ಮೊದಲಾದವರಿದ್ದರು.
Published on
ಕಾಸರಗೋಡು: ಪಿಎಫ್ ಚಂದಾದಾರರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು ಪ್ರಸ್ತುತ ಅತ್ಯಲ್ಪ ಪಿಂಚಣಿ ಮೊತ್ತವನ್ನು ಪಡೆಯುತ್ತಿದ್ದು, ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಪಿಂಚಣಿ ಯೋಜನೆಯನ್ನು ಪರಿಷ್ಕರಿಸುವಂತೆ ಪಿಎಫ್ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ.
ಚೆರ್ಕಳದಲ್ಲಿ ಸಮ್ಮೇಳನವನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ.ಕುಞಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಪಿ.ಕಾರ್ಯಂಬು ವರದಿ, ಜಿಲ್ಲಾ ಕೋಶಾಧಿಕಾರಿ ಎಂ.ರಾಮನ್ ಲೆಕ್ಕಪತ್ರ ಹಾಗೂ ರಾಜ್ಯ ಸಮಿತಿ ಸದಸ್ಯ ಟಿ.ಕೆ.ದಿವಾಕರನ್ ಕನ್ನಪುರಂ ಸಂಘಟನಾ ವರದಿ ಮಂಡಿಸಿದರು.
ಪಿ.ಕಮಲಾಕ್ಷನ್, ಗಿರಿಕೃಷ್ಣನ್, ಪಿ.ಶಿವಪ್ರಸಾದ್, ಎ.ನಾರಾಯಣನ್, ಬಿ.ಕೆ.ಮನೋಹರನ್, ಕೆ.ವಿ.ಬಾಲರಾಜನ್, ಕೆ.ಎನ್.ಪ್ರಭಾಕರನ್ ಮತ್ತು ಪಿ.ನಾರಾಯಣನ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಎ.ಆರ್.ಧನ್ಯವಾದ್ ಸ್ವಾಗತಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೆ.ವಿ.ಕುಞಂಬಾಡಿ ಅಧ್ಯಕ್ಷ, ಪಿ.ಕಾರ್ಯಂಬು ಕಾರ್ಯದರ್ಶಿ ಹಾಗೂ ಎಂ.ರಾಮನ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net