ಸರ್ಕಾರದ ಯೋಜನೆ ಎಲ್ಲರಿಗೂ ತಲುಪಲಿ

ವಡ್ಡರ್ಸೆ ಗ್ರಾಪಂ ಜನಸಂಪರ್ಕ ಸಭೆಯಲ್ಲಿ ಪಂಚಾಯಿತಿ ವಾಜಿ ಸದಸ್ಯ ಕೋಟಿ ಪೂಜಾರಿ ಅವರು ಶಾಸಕ ಕಿರಣ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಶ್ರೀಕಾಂತ್ ಹೆಗಡೆ, ರಾಮದಾಸ್, ಸುರೇಶ್ ಬಂಗೇರ ಇದ್ದರು.
ವಡ್ಡರ್ಸೆ ಗ್ರಾಪಂ ಜನಸಂಪರ್ಕ ಸಭೆಯಲ್ಲಿ ಪಂಚಾಯಿತಿ ವಾಜಿ ಸದಸ್ಯ ಕೋಟಿ ಪೂಜಾರಿ ಅವರು ಶಾಸಕ ಕಿರಣ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಶ್ರೀಕಾಂತ್ ಹೆಗಡೆ, ರಾಮದಾಸ್, ಸುರೇಶ್ ಬಂಗೇರ ಇದ್ದರು.
Published on
ಕೋಟ: ಜನಸಂಪರ್ಕ ಸಭೆ ಮುಖ್ಯ ಉದ್ದೇಶವೇ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಕೊಡುವುದು. ಸರ್ಕಾರದ ಯೋಜನೆಗಳ ಲಾಭ ಎಲ್ಲರಿಗೂ ತಲುಪುವಂತೆ ಅಧಿಕಾರಿಗಳು ಪ್ರಾವಾಣಿಕವಾಗಿ ಕೆಲಸ ವಾಡಬೇಕು ಎಂದು ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ಹೇಳಿದರು.
ಕೋಟದಲ್ಲಿ ಇತ್ತೀಚೆಗೆ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಡ್ಡರ್ಸೆ ಗ್ರಾಮ ಪಂಚಾಯಿತಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಶಾಸಕರು ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮದ ಮೂಲಸೌಕರ್ಯ, ರಸ್ತೆ, ಕುಡಿಯುವ ನೀರು, ವಸತಿ ಯೋಜನೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದರು. ಅಹವಾಲುಗಳನ್ನು ಆಲಿಸಿದ ಶಾಸಕರು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವೇಗವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗಡೆ, ಬ್ರಹ್ಮಾವರ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ವಡ್ಡರ್ಸೆ ಗ್ರಾಪಂ ಆಡಳಿತ ಅಧಿಕಾರಿ ಸುರೇಶ್ ಬಂಗೇರ, ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ.ಕೆ. ಮತ್ತಿತರರು ಉಪಸ್ಥಿತರಿದ್ದರು. ವಡ್ಡರ್ಸೆ ಪಿಡಿಒ ಜಯರಾಮ್ ಶೆಟ್ಟೆ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net