

ಕಾಸರಗೋಡು: ಇತಿಹಾಸವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ, ವಾಸ್ತವಾಂಶ ಅರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ರಸಪ್ರಶ್ನೆ ಪ್ರಶ್ನೆಗೆ ಸಂಬಂಧಿಸಿದಂತೆ ಶಿಕ್ಷಕರ ವಿರುದ್ಧ ಕೈಗೊಂಡ ಕ್ರಮವನ್ನು ಮರುಪರಿಶೀಲಿಸಿ ಅಮಾನತು ಹಿಂಪಡೆಯಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರನ್ನು ರಾಜಕೀಯ ಒತ್ತಡಗಳಿಂದ ರಕ್ಷಿಸಬೇಕು ಎಂದು ಎನ್‌ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಅನೂಪ್ ಕುಮಾರ್ ಒತ್ತಾಯಿಸಿದರು.