ನಾಗೂರಿನಲ್ಲಿ ನಡೆದ ಭಗವದ್ಗೀತಾ ಪಠಣ ತರಗತಿ ಸಮಾರೋಪ ಸಮಾರಂಭದಲ್ಲಿ ಯಳಜಿತ್ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ, ಯಶೋಧಾ ಅಡಿಗ, ನಾಗಶ್ರೀ ಮಧ್ಯಸ್ಥ, ಮಹಿಳಾ ವೇದಿಕೆ ಸದಸ್ಯರು ಉಪಸ್ಥಿತರಿದ್ದರು
ಬೈಂದೂರು: ಸನಾತನಿಗಳಿಗೆ ಪವಿತ್ರವಾದ ಭಗವದ್ಗೀತೆ ಜ್ಞಾನ ಸಾಗರವನ್ನೇ ಹೊಂದಿದೆ. ಭಗವದ್ಗೀತೆಯ ನಿತ್ಯ ಪಠಣದಿಂದ ಚಿತ್ತಶಾಂತಿ ದೊರೆಯುತ್ತದೆ. ಗೀತೆಯನ್ನು ಅರ್ಥೈಸಿಕೊಂಡು ಅದರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ವಾನವ ಜನ್ಮ ಸಾರ್ಥಕವಾಗುತ್ತದೆ. ಗೀತೆಯ ಪಠಣ ಎಲ್ಲರ ಮನೆಯಲ್ಲಿ ನಡೆಯಲಿ ಎಂದು ಯಳಜಿತ್ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು.
ನಾಗೂರು ಶ್ರೀ ಗುರುನರಸಿಂಹ ಸಭಾಭವನದಲ್ಲಿ ಕೂಟ ಮಹಾಜಗತ್ತು ಕಿರಿಮಂಜೇಶ್ವರ ಅಂಗಸಂಸ್ಥೆ ಮಹಿಳಾ ವೇದಿಕೆ ವತಿಯಿಂದ ಒಂದು ವಾರ ಕಾಲ ನಡೆದ ಭಗವದ್ಗೀತಾ ಪಠಣ ತರಗತಿಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಅಂಗಸಂಸ್ಥೆ ಅಧ್ಯಕ್ಷ ಬೈಂದೂರು ಚಂದ್ರಶೇಖರ ನಾವಡ ವಾತನಾಡಿ, ಬ್ರಹ್ಮಜ್ಞಾನವನ್ನು ಒಳಗೊಂಡ ಭಗವದ್ಗೀತೆ ಬದುಕಿನ ಎಲ್ಲ ಸಮಸ್ಯೆಗಳಿಗೆ ದಾರಿದೀಪದಂತೆ ವಾರ್ಗದರ್ಶನ ನೀಡುತ್ತದೆ. ಕತ್ತಲಿನಿಂದ ಬೆಳಕಿನೆಡೆ, ಅಜ್ಞಾನದಿಂದ ಜ್ಞಾನದೆಡೆ ಕೊಂಡೊಯ್ಯುವ ಗೀತೆಯ ಪಠಣ ಪುಣ್ಯಕಾರ್ಯ ಎಂದರು.
ಗೀತಾ ಪಠಣ ವಾರ್ಗದರ್ಶನ ವಾಡಿದ ಯಶೋದಾ ಅಡಿಗ ಮತ್ತು ನಾಗಶ್ರೀ ಮಧ್ಯಸ್ಥ ಅವರನ್ನು ಗೌರವಿಸಲಾಯಿತು. ವೇದಮೂರ್ತಿ ರಾಮಕೃಷ್ಣ ಜೋಶಿ ಇದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಕಾರಂತ ಸ್ವಾಗತಿಸಿ, ವಂದಿಸಿದರು.