

ಉಡುಪಿ ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ಕಾರ್ಯಗತವಾಗುತ್ತಿದೆ. ಅಂಗವೈಕಲ್ಯಕ್ಕೆ ಕಾರಣವಾಗುವ ಪೋಲಿಯೋ ಕಾಯಿಲೆ ಮಾರಣಾಂತಿಕವಾಗಿದೆ. ಅಂಗವೈಕಲ್ಯದ ಮಗುವನ್ನು ಹೆತ್ತವರು ಹಾಗೂ ಆ ಕುಟುಂಬ ಶಾಶ್ವತವಾಗಿ ದು;ಖ ಅನುಭವಿಸಬೇಕಾಗುತ್ತದೆ. ಹೀಗಾಗಿ ಲಸಿಕೆಯ ಎರಡು ಹನಿಗಳು ಮಗುವಿನ ಜೀವ ಉಳಿಸಬಲ್ಲದು. ಪಾಲಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು.