

ಪಡುಬಿದ್ರಿ: ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯ, ಸಮಾಜ ಸೇವೆ, ಇತರರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕು. ಅದಕ್ಕೆ ಸ್ಕೌಟ್ಸ್-ಗೈಡ್ಸ್ ಸಹಕಾರಿ ಎಂದು ಭಾರತ್ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಮಕ್ಕಳಿಗೆ ಶಿಸ್ತು, ಸಂಯಮ, ಹೃದಯ ವೈಶಾಲ್ಯ, ಸಾಮಾಜಿಕ ಕಳಕಳಿ ಕಲಿಸಬೇಕು. ಈ ಕೆಲಸವನ್ನು ಸ್ಕೌಟ್ಸ್-ಗೈಡ್ಸ್ ಮಾಡಿದರೆ ಘಟಕ ತೆರೆದಿರುವುದು ಸಾರ್ಥಕವಾಗುತ್ತದೆ.
— ಸುದರ್ಶನ ವೈ.ಎಸ್. ಗೌರವ ಕಾರ್ಯದರ್ಶಿ, ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ