ದೇವಸ್ಥಾನಗಳು ಸಂಸ್ಕಾರ, ಭಕ್ತಿಯ ಕೇಂದ್ರವಾಗಲಿ

ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸಹಸ್ರ ದೀಪಗಳ ದೀಪೋತ್ಸವ ನಡೆಯಿತು.
ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸಹಸ್ರ ದೀಪಗಳ ದೀಪೋತ್ಸವ ನಡೆಯಿತು.
Published on

ಕುಂದಾಪುರ:ಐತಿಹಾಸಿಕಹಿನ್ನೆಲೆಯುಳ್ಳ ಹಾಗೂ ತುಳುನಾಡಿನಅಧಿದೇವತೆ ಎಂದೇ ಪ್ರಸಿದ್ಧವಾಗಿರುವಬಸ್ರೂರಿನ ಶ್ರೀ ತುಳುವೇಶ್ವರದೇವಸ್ಥಾನದ ಸನ್ನಿಧಿಯಲ್ಲಿಸಹಸ್ರಾರು ದೀಪಗಳ ದೀಪೋತ್ಸವನಡೆಯಿತು.

ಜೈನಮಠದ ಸ್ವಸ್ತಿಶ್ರೀ ಡಾ.ಚಾರುಕೀರ್ತಿಭಟ್ಟಾರಕ ಪಂಡಿತಾಚಾರ್ಯವರ್ಯಮಹಾಸ್ವಾಮೀಜಿ ಆಶೀರ್ವಚನ ನೀಡಿ,ಸನಾತನಧರ್ಮದ ನಂಬಿಕೆ ಆಧಾರದಲ್ಲಿ ಬದುಕುವಎಲ್ಲ ಭಕ್ತರು ಶಿವ ದೇವಾಲಯನಿರ್ಮಾಣದಲ್ಲಿ ಕೈಜೋಡಿಸಬೇಕು.ಜತೆಗೆದೇವಸ್ಥಾನಗಳ ಊರು ಬಸ್ರೂರಿನಆಸುಪಾಸಿನಲ್ಲಿರುವ ತುಳುವೇಶ್ವರಿದೇವಸ್ಥಾನ ಸಹಿತ ಎಲ್ಲ ದೇವಸ್ಥಾನಗಳುವೈಭವದಿಂದ ಪೂಜೆ,ಜಾತ್ರೆನಡೆಸುವಂತಾಗಿ ಸಂಸ್ಕಾರ ಮತ್ತುಭಕ್ತಿಯ ಕೇಂದ್ರವಾಗಲಿ ಎಂದುಹರಸಿದರು.

ಒಡಿಯೂರುಶ್ರೀ ಗುರುದೇವಾನಂದ ಸ್ವಾಮೀಜಿಆಶೀರ್ವಚನ ನೀಡಿ,ತುಳುವೇಶ್ವರದೇವಳ ನೈಸರ್ಗಿಕ ಭಕ್ತಿ ಪ್ರಧಾನಕ್ಷೇತ್ರವಾಗಿದೆ.ಅಂದುತುಳುನಾಡಿನ ರಥ ಯಾತ್ರೆ ಬಸ್ರೂರಿನಿಂದಲೇಆರಂಭಗೊಂಡಿದ್ದನ್ನು ಸ್ಮರಿಸಿದರು.ಎಲ್ಲರಸಹಕಾರದೊಂದಿಗೆ ವೈಭವದ ತುಳುವೇಶ್ವರದೇವಸ್ಥಾನ ನಿರ್ಮಾಣವಾಗಲಿ ಎಂದರು.

ತುಳುವರ್ಲ್ಡ್ಸಂಸ್ಥೆಯ ಮುಖ್ಯಸ್ಥ ಡಾ.ರಾಜೇಶಆಳ್ವ,ತುಳುವೇಶ್ವರಜೀರ್ಣೋದ್ಧಾರ ಸಮಿತಿ ಅಧ್ಯಕ್ಷದೇವಾನಂದ ಶೆಟ್ಟಿ ಬಸ್ರೂರುಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net