ಜ್ಞಾನ ಸಂಪಾದನೆಗೂ ತಂತ್ರಜ್ಞಾನ ಬಳಕೆಯಾಗಲಿ

 ಮಧೂರು ಪಂಚಾಯಿತಿ ಸಮಿತಿ ಆಯೋಜಿಸಿದ್ದ ಪುಸ್ತಕ ವಿತರಣೆ ಸಮಾರಂಭವನ್ನು ಎಂ.ಎಲ್.ಅಶ್ವಿನಿ ಉದ್ಘಾಟಿಸಿ ವಾತನಾಡಿದರು. ಮೋಹನನ್, ರಾಮಪ್ಪ ಮಂಜೇಶ್ವರ, ಸುಜ್ಞಾನಿ ಶಾನುಭಾಗ್, ಭಾನುಪ್ರಕಾಶ್ ಇತರರಿದ್ದರು.
ಮಧೂರು ಪಂಚಾಯಿತಿ ಸಮಿತಿ ಆಯೋಜಿಸಿದ್ದ ಪುಸ್ತಕ ವಿತರಣೆ ಸಮಾರಂಭವನ್ನು ಎಂ.ಎಲ್.ಅಶ್ವಿನಿ ಉದ್ಘಾಟಿಸಿ ವಾತನಾಡಿದರು. ಮೋಹನನ್, ರಾಮಪ್ಪ ಮಂಜೇಶ್ವರ, ಸುಜ್ಞಾನಿ ಶಾನುಭಾಗ್, ಭಾನುಪ್ರಕಾಶ್ ಇತರರಿದ್ದರು.
Published on
ಕಾಸರಗೋಡು: ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಸಹಿತ ಆಧುನಿಕ ತಂತ್ರಜ್ಞಾನವನ್ನು ಮನರಂಜನೆ ಜತೆಗೆ ತಮ್ಮ ಜ್ಞಾನ ಸಂಪಾದನೆಗೂ ಬಳಸಬೇಕು. ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯವನ್ನು ಬಲಿಷ್ಠಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ವಿದ್ಯಾಲಯದಲ್ಲಿ ಎಸ್‌ಸಿ-ಎಸ್‌ಟಿ ಮಧೂರು ಪಂಚಾಯಿತಿ ಸಮಿತಿ ವತಿಯಿಂದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಕೇಂದ್ರಮಟ್ಟದ ಬಿರ್ಸಾ ಮುಂಡಾ ಅನ್‌ಸಂಗ್ ಹೀರೊ ಪ್ರಶಸ್ತಿ ಪುರಸ್ಕೃತ ಸಂಜೀವ ಪುಲಿಕ್ಕೂರ್ ಅವರನ್ನು ಎಂ.ಎಲ್.ಅಶ್ವಿನಿ ಸನ್ಮಾನಿಸಿದರು.
ಎಸ್‌ಸಿ-ಎಸ್‌ಟಿ ಮೋರ್ಚಾ ಮಧೂರು ಪಂಚಾಯಿತಿ ಸಮಿತಿ ಅಧ್ಯಕ್ಷ ಮೋಹನನ್ ಕಲಿಯಂಗಾಡ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಪಂ ಸದಸ್ಯ ರಾಮಪ್ಪ ಮಂಜೇಶ್ವರ, ಮಧೂರು ಗ್ರಾ.ಪಂ. ಅಧ್ಯಕ್ಷೆ ಸುಜ್ಞಾನಿ ಶಾನುಭಾಗ್, ಉಪಾಧ್ಯಕ್ಷ ಭಾನುಪ್ರಕಾಶ್, ಸುಕುವಾರ್ ಕುದುರೆಪ್ಪಾಡಿ, ಾಧವ, ಮಹೇಶ್ ಮಧೂರು, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net