ಪ್ರತಿಭಾವಂತ ವಿದ್ಯಾರ್ಥಿಗೆ ಸಿಗಲಿ ಬೆಳೆಯುವ ಅವಕಾಶ

ಗುರುಕುಲ ಕಾರ್ನಿವಲ್-ಮಕ್ಕಳ ಹಬ್ಬ ಉದ್ಘಾಟನೆ
ಕೋಟೇಶ್ವರದ ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಗುರುಕುಲ ಕಾರ್ನಿವಲ್-ಮಕ್ಕಳ ಹಬ್ಬವನ್ನು ಸಂಗೀತ ನಿರ್ದೇಶಕ ರವಿ ಬಸ್ರೂರು ಉದ್ಘಾಟಿಸಿದರು. ಪ್ರಮುಖರಾದ ಅನುಪಮಾ ಎಸ್.ಶೆಟ್ಟಿ, ಕೆ.ಸುಭಾಶ್ವಂದ್ರ ಶೆಟ್ಟಿ, ಸಂದೀಪ ನಾಯ್ಕ ಉಪಸ್ಥಿತರಿದ್ದರು.
ಕೋಟೇಶ್ವರದ ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಗುರುಕುಲ ಕಾರ್ನಿವಲ್-ಮಕ್ಕಳ ಹಬ್ಬವನ್ನು ಸಂಗೀತ ನಿರ್ದೇಶಕ ರವಿ ಬಸ್ರೂರು ಉದ್ಘಾಟಿಸಿದರು. ಪ್ರಮುಖರಾದ ಅನುಪಮಾ ಎಸ್.ಶೆಟ್ಟಿ, ಕೆ.ಸುಭಾಶ್ವಂದ್ರ ಶೆಟ್ಟಿ, ಸಂದೀಪ ನಾಯ್ಕ ಉಪಸ್ಥಿತರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಇಂದಿನ ಎಐ ತಂತ್ರಜ್ಞಾನ ನಮ್ಮನ್ನು ಮೀರಿ ನಡೆಯುತ್ತಿದ್ದು, ಅದನ್ನು ಮೀರಿ ನಡೆಯುವ ಬೆಳವಣಿಗೆಗಳು ನಮ್ಮಲ್ಲಿ ಆಗಬೇಕು. ನಿಮ್ಮನ್ನು ನೀವು ಗುರುತಿಸಿಕೊಳ್ಳುವ ರೀತಿಯ ಕೆಲಸ ಆಗಬೇಕು. ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಗೂ ಶಿಕ್ಷಣದ ಜತೆಗೆ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ಕಲ್ಪಿಸಬೇಕು ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಕೋಟೇಶ್ವರದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಗುರುಕುಲ ಕಾರ್ನಿವಲ್-ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ಕೆ.ಸುಭಾಶ್ವಂದ್ರ ಶೆಟ್ಟಿ, ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ ನಾಯ್ಕ ಉಪಸ್ಥಿತರಿದ್ದರು.

ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಡಾ.ರೂಪಾ ಶೆಣೈ ಸ್ವಾಗತಿಸಿದರು. ಶಿಕ್ಷಕಿ ಸುಷ್ಮಾ ಮುರಳಿ ಅತಿಥಿಯನ್ನು ಪರಿಚಯಿಸಿದರು. ಐಶ್ವರ್ಯಾ ಕಾರ್ಯಕ್ರಮ ನಿರ್ವಹಿಸಿದರು. ವಿಜಯಲಕ್ಷ್ಮೀ ವಂದಿಸಿದರು.

ಸಾಂಸ್ಕೃತಿಕ ನೃತ್ಯ ವೈವಿಧ್ಯ

ಬೇಬಿ ಶಾರ್ಕ್ ಟ್ಯಾಂಕ್, ಫೇಸ್ ಪೇಂಟಿಂಗ್, ಸ್ಪಾಟ್ ಪೋಟ್ರೇಟ್ ಮತ್ತು ಕ್ಯಾರಿಕೇಚರ್, ಕಾರ್ಟೂನ್ ಮ್ಯಾಸ್ಕಾಟ್, ಸ್ಪೀಕಿಂಗ್ ವಾಲ್, ಥ್ಯಾಂಕ್ ಯು ಕಾರ್ಡ್ ಮತ್ತು ವಿಶೇಷವಾಗಿ ಗುರುಕುಲ ವಿದ್ಯಾರ್ಥಿಗಳ ಪಾಲಕರಿಂದ ಆಹಾರ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳ ಹಬ್ಬದಲ್ಲಿ ಮಕ್ಕಳ ಮನರಂಜನೆಗಾಗಿ ಹಲವಾರು ಆಕರ್ಷಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ನೃತ್ಯ ವೈವಿಧ್ಯ ಸ್ಪರ್ಧೆಗಳು ಜರುಗಿತು.

ಇರುವೆಗಳು ಬೆಲ್ಲದ ಸುತ್ತ ಯಾವ ಆಹ್ವಾನವೂ ಇಲ್ಲದೆ ಸುತ್ತಿಕೊಳ್ಳುತ್ತವೆಯೋ ಅದೇ ರೀತಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಇರುವೆಗಳ ರೀತಿ ವಿದ್ಯಾರ್ಥಿಗಳು ಬಂದಿದ್ದಾರೆ. ಆ ಮಕ್ಕಳಿಗೆ ಬೆಲ್ಲದ ಜ್ಞಾನವನ್ನು ಗುರುಕುಲ ವಿದ್ಯಾಸಂಸ್ಥೆ ವಿದ್ಯೆಯ ಮೂಲಕ ಕೊಡುತ್ತಿದೆ. ಅದ್ಭುತ ರೀತಿಯಲ್ಲಿ ಗುರುಕುಲ ವಿದ್ಯಾಸಂಸ್ಥೆ ಬೆಳೆದಿದ್ದು, ನೂರಾರು ವರ್ಷ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಅವರ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಲಿ.
ರವಿ ಬಸ್ರೂರು ಸಂಗೀತ ನಿರ್ದೇಶಕ