ಬಾಂಧವ್ಯ ಬೆಸೆಯುವ ವೇದಿಕೆಯಾಗಲಿ

‘ಕೆಸರ್ಡ್‌ ಒಂಜಿ ದಿನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಅಶೋಕ್ ರೈ ಮಾತನಾಡಿದರು. ಪ್ರಮುಖರಾದ ಸತೀಶ್ ರೈ, ರಾಜೇಶ್ ರೈ ಮೇಗಿನಮನೆ, ಗಂಗಾಧರ ರೈ ಮತ್ತಿತರರು ಇದ್ದರು.
‘ಕೆಸರ್ಡ್‌ ಒಂಜಿ ದಿನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಅಶೋಕ್ ರೈ ಮಾತನಾಡಿದರು. ಪ್ರಮುಖರಾದ ಸತೀಶ್ ರೈ, ರಾಜೇಶ್ ರೈ ಮೇಗಿನಮನೆ, ಗಂಗಾಧರ ರೈ ಮತ್ತಿತರರು ಇದ್ದರು.
Published on
ಪುತ್ತೂರು ಗ್ರಾಮಾಂತರ: ಈ ಹಿಂದೆ ಗದ್ದೆ ಬೇಸಾಯ ಮಾಡುತ್ತಿದ್ದ ಕಾಲದಲ್ಲಿ ಆಟಿ ತಿಂಗಳಲ್ಲಿ ಒಂದು ಮನೆಯಲ್ಲಿ ಸೇರಿಕೊಂಡು ಪ್ರೀತಿ-ವಿಶ್ವಾಸದಲ್ಲಿ ಬೆರೆಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅಡಿಕೆ ತೋಟಗಳಾಗಿ ಮಾರ್ಪಡುಗೊಂಡು ಗದ್ದೆ-ಬೇಸಾಯ ಮಾಯವಾಗಿದೆ. ಇಂದು ‘ಕೆಸರ್ಡ್‌ ಒಂಜಿ ದಿನ ’ ಹೆಸರಿನಲ್ಲಿ ಹಳ್ಳಿ ಜನರನ್ನು ಒಂದೆಡೆ ಸೇರಿಸಿ ನಡೆಸಲಾಗುತ್ತಿರುವ ಕಾರ್ಯಕ್ರಮ ಪರಸ್ಪರ ಬಾಂಧವ್ಯ ಬೆಸೆಯಲು ಸಹಕಾರಿಯಾಗಿರುವ ವೇದಿಕೆಯಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಬಡಗನ್ನೂರು ಗ್ರಾಮದ ಪಡುಮಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದ ಗದ್ದೆಯಲ್ಲಿ ಭಾನುವಾರ ‘ಕೆಸರ್ಡ್‌ ಒಂಜಿ ದಿನ’ ಕಾರ್ಯಕ್ರಮದ ಸಮಾರೋಪದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪಡುಮಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ರೈ ಮೇಗಿನಮನೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ, ಸದಸ್ಯರಾದ ಶ್ರೀನಿವಾಸ ಗೌಡ, ಜನಾರ್ದನ ಪೂಜಾರಿ, ಪುರಂದರ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೊಲ ಗೆಳೆಯರ ಬಳಗ ಯುವಕ ಮಂಡಲ ಅಧ್ಯಕ್ಷ ಪ್ರಕಾಶ್ ರೈ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net