ಹಿಂದೂಗಳು ಭಾರತದ ಪರಂಪರೆ ಎತ್ತಿಹಿಡಿಯಲಿ

 ಕಾಸರಗೋಡು ಪ್ರಖಂಡ ವಿಎಚ್‌ಪಿ ವಾರ್ಷಿಕ ಬೈಠಕ್ ಮತ್ತು ಸವಾವೇಶದಲ್ಲಿ ಗುರುಪ್ರಸಾದ್ ಕೋಟೆಕಣಿ ದೀಪ ಬೆಳಗಿಸಿದರು. ಸಂಕಪ್ಪ ಭಂಡಾರಿ, ಡಾ.ಶಿವರಾಮ ಭಟ್ ಇತರರಿದ್ದರು.
ಕಾಸರಗೋಡು ಪ್ರಖಂಡ ವಿಎಚ್‌ಪಿ ವಾರ್ಷಿಕ ಬೈಠಕ್ ಮತ್ತು ಸವಾವೇಶದಲ್ಲಿ ಗುರುಪ್ರಸಾದ್ ಕೋಟೆಕಣಿ ದೀಪ ಬೆಳಗಿಸಿದರು. ಸಂಕಪ್ಪ ಭಂಡಾರಿ, ಡಾ.ಶಿವರಾಮ ಭಟ್ ಇತರರಿದ್ದರು.
Published on
ಕಾಸರಗೋಡು: ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ನಿರ್ವಾಣ ಕಾರ್ಯ ಕೈಗೊಳ್ಳುವ ಮೂಲಕ ಹಿಂದೂ ಸವಾಜದ ಶಕ್ತಿ ಪ್ರದರ್ಶನಗೊಂಡಿದೆ. ವಿಶ್ವಗುರುವಾಗಿ ಬೆಳೆಯುತ್ತಿರುವ ಭಾರತ ದೇಶದ ಭವ್ಯ ಪರಂಪರೆಯನ್ನು ಎತ್ತಿಹಿಡಿಯುವ ಕೆಲಸ ಸಮಸ್ತ ಹಿಂದೂಗಳಿಂದ ನಡೆಯಬೇಕು ಎಂದು ವಿಎಚ್‌ಪಿ ಕಣ್ಣೂರು ವಿಭಾಗದ ಪ್ರಮುಖ್ ಸಂಕಪ್ಪ ಭಂಡಾರಿ ಹೇಳಿದರು.
ಕಾಸರಗೋಡು ಕೋಟೆಕಣಿ ಶ್ರೀರಾಮನಾಥ ಭವನದಲ್ಲಿ ವಿಎಚ್‌ಪಿ ಕಾಸರಗೋಡು ಪ್ರಖಂಡ ವಾರ್ಷಿಕ ಬೈಠಕ್ ಮತ್ತು ಸವಾವೇಶದಲ್ಲಿ ಪ್ರಧಾನ ಭಾಷಣ ಮಾಡಿದರು. ವಿಎಚ್‌ಪಿ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ವಿಎಚ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶಿವರಾಮ ಭಟ್, ವಾತೃಶಕ್ತಿ ಜಿಲ್ಲಾದ್ಯಕ್ಷೆ ಪದ್ಮಾ ಮೋಹನ್‌ದಾಸ್, ರಾಮಕೃಷ್ಣ ಹೊಳ್ಳ, ಕಾಸರಗೋಡು ಪ್ರಖಂಡ ಕಾರ್ಯದರ್ಶಿ ಡಾ.ಕೆ.ಎನ್.ವೆಂಕಟರಮಣ ಹೊಳ್ಳ, ಹಿರಿಯ ಕಾರ್ಯಕರ್ತ ಲಕ್ಷ್ಮೀಕಾಂತ್ ನೆಲ್ಲಿಕುಂಜೆ, ವಾತೃ ಸಮಿತಿಯ ಶ್ರೀಲತಾ, ಡಾ.ಗಣೇಶ್ ಚೌಕಿ ಉಪಸ್ಥಿತರಿದ್ದರು.
ಗಣಪತಿ ಅಮೈ ಸ್ವಾಗತಿಸಿದರು. ಕಿಶೋರ್ ಕುವಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತ ಕೆರೆಮನೆ ವರದಿ ವಾಚಿಸಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net