ರೈತರು ಕೃಷಿ ಉತ್ಪನ್ನ ಮೌಲ್ಯವರ್ಧನೆಗೆ ಮುಂದಾಗಲಿ

 ಹಲಸಿನ ಕೇಕ್ ಕತ್ತರಿಸುವ ಮೂಲಕ ಕಡಬದಲ್ಲಿ ಹಲಸು ಮೇಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಶ್ರೀಪಡ್ರೆ, ಜೇಮ್ಸ್ ಕ್ರಿಶಲ್ ಡಿಸೋಜ, ಭರತ್‌ರಾಜ್ ಸೊರಕೆ ಮೊದಲಾದವರು ಉಪಸ್ಥಿತರಿದ್ದರು.
ಹಲಸಿನ ಕೇಕ್ ಕತ್ತರಿಸುವ ಮೂಲಕ ಕಡಬದಲ್ಲಿ ಹಲಸು ಮೇಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಶ್ರೀಪಡ್ರೆ, ಜೇಮ್ಸ್ ಕ್ರಿಶಲ್ ಡಿಸೋಜ, ಭರತ್‌ರಾಜ್ ಸೊರಕೆ ಮೊದಲಾದವರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ನಡೆಯಬೇಕು. ವಿವಿಧ ಸಮಸ್ಯೆಗಳಿಂದ ಕಂಗಾಲಾಗಿರುವ ಕೃಷಿಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಡಬದ ಅನುಗ್ರಹ ಸಭಾಭವನದಲ್ಲಿ ಜೆಸಿಐ ಕಡಬ ಕದಂಬ ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಆಶ್ರಯದಲ್ಲಿ ವಿವಿಧ ಸಂ ಸಂಸ್ಥೆಗಳ ಸಹಕಾರದೊಂದಿಗೆ ಹಲಸು ಮೇಳ-2026 ಕೃಷಿ ಉತ್ಸವವನ್ನು ಹಲಸಿನ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ವಾತನಾಡಿದರು.
ಅಂತಾರಾಷ್ಟ್ರೀಯ ಹಲಸು ರಾಯಭಾರಿ ಶ್ರೀಪಡ್ರೆ ದಿಕ್ಸೂಚಿ ಭಾಷಣ ವಾಡಿ, ಇಡೀ ಜಗತ್ತಿನಲ್ಲಿ ಹಲಸಿನ ಬಗ್ಗೆ ಸಂಶೋಧನೆ ಆಗಿರುವುದು ತೀರಾ ಕಡಿಮೆ. ಭಾರತದಲ್ಲಿ ಹಲಸಿನ ಸಂಶೋಧನಾ ಕೇಂದ್ರಗಳು ನಿರ್ಮಾಣವಾಗಬೇಕು. ಅಂತಾರಾಷ್ಟ್ರೀಯ ಮಟ್ಟದ ಹಲಸು ಮೇಳಗಳು ನಡೆಯಬೇಕು ಎಂದರು.
ಜೆಸಿಐ ಕಡಬ ಕದಂಬದ ಅಧ್ಯಕ್ಷ ಜೇಮ್ಸ್ ಕ್ರಿಶಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್, ಜೇಸಿ ವಲಯ 15ರ ಅಧ್ಯಕ್ಷ ಸಂತೋಷ್ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುವಾರ್ ಸೊರಕೆ ಅವರನ್ನು ಸನ್ಮಾನಿಸಲಾಯಿತು. ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್‌ರಾಜ್ ಸೊರಕೆ ಉಪಸ್ಥಿತರಿದ್ದರು.
ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿದರು. ಕಾಶೀನಾಥ್ ಗೋಗಟೆ ವಂದಿಸಿದರು. ಶಿವಪ್ರಸಾದ್ ರೈ ಮೈಲೇರಿ ಸನ್ಮಾನಪತ್ರ ವಾಚಿಸಿದರು. ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.

ಹಿಂದಿನ ಕಾಲದಲ್ಲಿ ನಮಗೆ ಹಸಿವು ನೀಗಿಸುವ ಫಲವಾಗಿದ್ದ ಹಲಸಿನ ಬಗ್ಗೆ ಇಂದಿನ ಜನಾಂಗಕ್ಕೆ ತಿಳಿಸುವ ಕಾರ್ಯವಾಗಬೇಕು. ರೈತರು ಒಳ್ಳೆಯ ತಳಿಗಳ ಹಲಸನ್ನು ಮಿಶ್ರಬೆಳೆಯಾಗಿ ಬೆಳೆದು ಆರ್ಥಿಕ ಲಾಭ ಪಡೆಯಬೇಕು. ಈ ರೀತಿಯ ಕಾರ್ಯಕ್ರಮಗಳು ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು ಉತ್ತಮ ವೇದಿಕೆಯಾಗಿದೆ.

— ಭಾಗೀರಥಿ ಮುರುಳ್ಯ, ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net